ಧಾರವಾಡ: ರಾಜಕಾರಣಿಗಳ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ. ಅನುಮಾನ ಬಂದಿರುವುದಕ್ಕೆ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿದ ಕಿಡಿಗೇಡಿಗಳು
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಕಾಂಗ್ರೆಸ್ ಬಿಟ್ಟು ಬಂದ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಅಂಥವರ ತೇಜೋವಧೆ ಮಾಡುವಂತಹ ಸಂದರ್ಭದಲ್ಲಿ ಅವರು ಕೋರ್ಟ್‌ಗೆ ಹೋಗಿದ್ದು ತಪ್ಪಲ್ಲ. ಸಿಡಿ ವಿಚಾರದಲ್ಲಿ ಮಾತ್ರ ಅವರು ಕೋರ್ಟ್‌ಗೆ ಹೋಗಿಲ್ಲ, ಬೇರೆ ಬೇರೆ ಕಾರಣಗಳಿಂದ ಹೋಗಿದ್ದಾರೆ ಎಂದರು.
ಬೇರೆ ಪಕ್ಷದಿಂದ ಬಂದವರು, ಬಿಜೆಪಿ ಪಕ್ಷದ ಚಿನ್ಹೆ ಮೇಲೆ ಗೆದ್ದವರು ಇಂಥ ಸಂದರ್ಭದಲ್ಲಿ ಅವರ ತೇಜೋವಧೆ ಮಾಡುವ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕಾಗಿದ್ದು ಕೋರ್ಟ್‌ಗೆ ಹೋಗಿದ್ದಾರೆ. ಮತ್ತಷ್ಟು ಸಚಿವರು ಕೋರ್ಟ್‌ಗೆ ಹೋಗುವ ಬಗ್ಗೆ ನಾನು ಹೇಗೆ ಭವಿಷ್ಯ ಹೇಳೋಕೆ ಆಗುತ್ತೆ ಎಂದರು.
ಯಡಿಯೂರಪ್ಪ ಸಿಎಂ ಇದ್ದಾಗ ಈ ರೀತಿ ಘಟನೆ ನಡೆಯುತ್ತಿವೆ ಎನ್ನುವುದಕ್ಕಿಂತ, ಯಾವ ರೀತಿ ಅದನ್ನು ಸರಿಪಡಿಸಬೇಕು ಎನ್ನುವುದು ವಿಚಾರ ಮಾಡಬೇಕಾಗುತ್ತೆ ಎಂದು ಶ್ರೀರಾಮುಲು ಹೇಳಿದ್ದಾರೆ.