ಧಾರವಾಡ: ಎಐಸಿಸಿ ನಾಯಕ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನಮ್ಮ ರಾಜ್ಯಾಧ್ಯಕ್ಷರು ನಿನ್ನೆ ಕೆಲ ವಿಚಾರ ಹೇಳಿದ್ದಾರೆ. ಕೆಲ ಬಲ್ಲ ಮೂಲಗಳ ಪ್ರಕಾರ ನಮ್ಮ ಅಧ್ಯಕ್ಷರು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಧಾರವಾಡದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ದೃಷ್ಟಿಕೋನದಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಕೆಲವು ಮೂಲಗಳ ಪ್ರಕಾರ ಅವರಿಗೆ ಈ ಹೆಸರು ಕೊಟ್ಟಿದ್ದಾರೆ ಎಂದರು.
ಕಟೀಲ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಒಬ್ಬರು ಪಕ್ಷದ ಅಧ್ಯಕ್ಷರು. ಇನ್ನೊಬ್ಬರು ಮಾಜಿ ಸಿಎಂ. ಯಾರು ಏನು ಮಾತನಾಡುತ್ತಿದ್ದಾರೆ ಎಂದು ರಾಜ್ಯದ ಜನ ನೋಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರೊಬ್ಬರು ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳೋದು ಸರಿಯಾದ ಮಾತಲ್ಲ. ಒಬ್ಬ ಹಿರಿಯ ನಾಯಕರಾಗಿ ಹೀಗೆ ಮಾತನಾಡುವುದಲ್ಲ. ಆ ರೀತಿಯ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಓದಿ: ರಾಹುಲ್ ಗಾಂಧಿಗೆ ಅಗೌರವ ತರುವಂತೆ ಯಾರೂ ಮಾತನಾಡಬಾರದು : ಕಟೀಲ್‌ಗೆ ಬಿಎಸ್ವೈ 'ತಿವಿ' ಮಾತು