ಹುಬ್ಬಳ್ಳಿ : ಸಚಿವ ಕೆ ಎಸ್ ಈಶ್ವರಪ್ಪ ಅವರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಿನ್ನೆ (ಗುರುವಾರ) ರಾತ್ರಿ ಅವರ ಜತೆ ಮಾತನಾಡಿದ್ದೇನೆ.
ಸ್ವಯಂಪ್ರೇರಣೆಯಿಂದ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು. ಆದಷ್ಟು ಬೇಗ ಆರೋಪ ಮುಕ್ತನಾಗ್ತಿಗುವ ವಿಶ್ವಾಸ ಈಶ್ವರಪ್ಪ ಅವರಿಗಿದೆ. ಶೀಘ್ರ ತನಿಖೆ ಮಾಡಿಸಿ ಎಂದಿದ್ದಾರೆ. ಇಡೀ ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ಆಗುತ್ತದೆ. ಪೊಲೀಸರು ತಮ್ಮಕೆಲಸವನ್ನ ಮಾಡಲು ಬಿಡಬೇಕು ಎಂದರು.
ಕೆ ಜೆ ಜಾರ್ಜ್ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆದಿದ್ದರು. ಆದರೆ, ಬಂಧಿಸಿರಲಿಲ್ಲ. ರಾಜ್ಯ ಪೊಲೀಸರು, ಸಿಬಿಐ ಕೂಡ ಅವರನ್ನು ಬಂಧಿಸಿರಲಿಲ್ಲ. ವಿರೋಧ ಪಕ್ಷದವರು ತನಿಖಾಧಿಕಾರಿ, ಜಡ್ಜ್ ಆಗುವ ಅವಶ್ಯಕತೆ ಇಲ್ಲ. ತನಿಖೆಯಿಂದ ಸತ್ಯ ಹೊರ ಬರುತ್ತದೆ. ಪ್ರಕರಣದ ತನಿಖೆ ಆದ ಮೇಲೆ ಈಶ್ವರಪ್ಪ ಆರೋಪ ಮುಕ್ತರಾಗುತ್ತಾರೆ ಎಂಬ ವಿಶ್ವಾಸವಿದೆ. ಸರ್ಕಾರಕ್ಕೆ ಹಿನ್ನೆಡೆ, ಮುನ್ನಡೆ ಅನ್ನೊ ಮಾತೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ಆಗಿದೆ, ಅವರನ್ನು ಕರೆಸಿ ಮಾತಾಡುವೆ; ಸಿಎಂ ಬೊಮ್ಮಾಯಿ