ಹುಬ್ಬಳ್ಳಿ: ನಗರದ ಬಿಆರ್ಟಿಎಸ್ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದ ಸಚಿವ ಜಗದೀಶ ಶೆಟ್ಟರ್, ಆದಷ್ಟು ಬೇಗ ಸಾರ್ವಜನಿಕರಿಗೆ ವ್ಯವಸ್ಥಿತ ಸಾರಿಗೆ ಸೇವೆ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ರು.
ಸಚಿವ ಶೆಟ್ಟರ್ ಮಾತನಾಡಿ, ಮುಂದಿನ ಒಂದು ತಿಂಗಳಿನಲ್ಲಿ ಪ್ರಾಯೋಗಿಕ ಬಿಆರ್ಟಿಎಸ್ ಯೋಜನೆಗೆ ಚಾಲನೆ ನೀಡುವ ಮೂಲಕ ಹೊಸೂರ ಟರ್ಮಿನಲ್‌ನಿಂದ ಲಾಂಗ್ ರೂಟ್ ಬಸ್‌ಗಳನ್ನು ಬಿಡಲಾಗುವುದು ಎಂದರು. ಯೋಜನೆಯಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಿ ಸರಿಪಡಿಸಲಾಗುತ್ತಿದೆ. ಈ ಹಿಂದೆ ಆಗಿರುವ ತಪ್ಪುಗಳನ್ನು ತಿದ್ದುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ರು.
ಸಚಿವ ಸಂಪುಟದ ಕುರಿತು ಮಾತನಾಡುತ್ತಾ, ಖಾತೆ ಹಂಚಿಕೆಯಲ್ಲಿದ್ದ ಅಸಮಾಧಾನಗಳೆಲ್ಲವೂ ಶಮನವಾಗಿದೆ. ಯಾವುದೇ ಅನುಮಾನ ಬೇಡ. ಸರ್ಕಾರ ಸುಭದ್ರವಾಗಿ ಅಧಿಕಾರ ನಡೆಸಲಿದೆ. ಪಕ್ಷದಲ್ಲಿನ ಹಿರಿಯರನ್ನು ಕಡೆಗಣಿಸಿಲ್ಲ ಎಂದು ನಗುತ್ತಲೇ ಹೇಳುತ್ತಾ ಮುಂದೆ ನಡೆದರು.