ETV Bharat / state

ಶಿಸ್ತು ತರುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ: ಜಗದೀಶ್ ಶೆಟ್ಟರ್ - ಕ್ರಿಸ್​​ಮಸ್ ಹಾಗೂ ಹೊಸ ವರ್ಷ ಆಚರಣೆ

ಕ್ರಿಸ್​​ಮಸ್ ಹಾಗೂ ಹೊಸ ವರ್ಷ ಆಚರಣೆ ವೇಳೆ ಜನರು ಹೆಚ್ಚಾಗಿ ಸೇರಬಾರದು ಎಂಬ ಕಾರಣಕ್ಕೆ ಕರ್ಫ್ಯೂ ಜಾರಿ ಮಾಡಲಾಗಿದೆ. ಕರ್ಫ್ಯೂಗಿಂತ ಜನರು ಸ್ವಪ್ರೇರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

minister-jagadish-shetter-talk-about-night-curfew-enforcement
ಜಗದೀಶ್ ಶೆಟ್ಟರ್
author img

By

Published : Dec 24, 2020, 3:56 PM IST

ಹುಬ್ಬಳ್ಳಿ: ಶಿಸ್ತನ್ನು ತರುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ಕ್ಕೆ ಮಾಡಿದ್ರೂ, 11ಕ್ಕೆ ಮಾಡಿದ್ರೂ ವಿರೋಧ ವ್ಯಕ್ತವಾಗುವುದು ಸಹಜ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಜಗದೀಶ್ ಶೆಟ್ಟರ್

ನಗರದಲ್ಲಿಂದು ಮಾತನಾಡಿದ ಅವರು, ಕ್ರಿಸ್​​ಮಸ್ ಹಾಗೂ ಹೊಸ ವರ್ಷ ಆಚರಣೆ ವೇಳೆ ಜನರು ಹೆಚ್ಚಾಗಿ ಸೇರಬಾರದೆಂದು ಕರ್ಫ್ಯೂ ಜಾರಿ ಮಾಡಲಾಗಿದೆ. ಕರ್ಫ್ಯೂಗಿಂತ ಜನರು ಸ್ವಯಂಪ್ರೇರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೆಲವು ಹೋಟೆಲ್​​​​​ಗಳು ರಾತ್ರಿ 12 ರಿಂದ 1 ಗಂಟೆಯವರೆಗೆ ತೆರೆದಿರುತ್ತವೆ. ಅದಕ್ಕಾಗಿಯೇ ಸ್ವಲ್ಪ ಟೈಂ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದರು.

ಓದಿ: ರಾತ್ರಿ ಕರ್ಪ್ಯೂ ವೇಳೆ ವಿನಾಕಾರಣ ಓಡಾಡಿದ್ರೆ ಕೇಸ್ : ಪಂತ್​ ಎಚ್ಚರಿಕೆ

ನೈಟ್ ಕರ್ಫ್ಯೂ ಪುನರ್ ಪರಿಶೀಲಿಸಬೇಕು ಎಂದು ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ನಡೆಸುವವರಿಗೆ ಜವಾಬ್ದಾರಿ ಜಾಸ್ತಿ ಇರುತ್ತೆ. ವಿರೋಧ ಮಾಡುವವರು ಮಾಡಲಿ, ಸರ್ಕಾರ ಈಗಾಗಲೇ ತನ್ನ ನಿರ್ಧಾರ ಪ್ರಕಟಿಸಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ದಿಂಗಾಲೇಶ್ವರ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯೆ:

ಮೂರು ಸಾವಿರ ಮಠದ ಆಸ್ತಿ ಕಬಳಿಕೆ ದಿಂಗಾಲೇಶ್ವರ ಸ್ವಾಮೀಜಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಸಚಿವ ಜಗದೀಶ್ ಶೆಟ್ಟರ್, ಮಠದ ಆಸ್ತಿ ದಾನ ವಿಚಾರವಾಗಿ ಹಿಂದಿನ ಸ್ವಾಮೀಜಿಗಳು ಮಾತನಾಡಿದ್ದರು. ನಮ್ಮ ತಂದೆ ಹಾಗೂ ನನ್ನ ಮುಂದೆ ಹಲವು ಬಾರಿ ವಿಚಾರದ ಚರ್ಚೆ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲೂ ಮೆಡಿಕಲ್ ಕಾಲೇಜು ಆರಂಭವಾದರೆ, ಜಮೀನು ದಾನ ನೀಡುತ್ತೇನೆ ಎಂದಿದ್ದರು. ಹೀಗಾಗಿ ನಾವು ಕೂಡ ಹಲವು ಬಾರಿ ಕೋರೆ ಅವರಿಗೆ ಮೆಡಿಕಲ್ ಕಾಲೇಜು ಆರಂಭಕ್ಕೆ ಒತ್ತಾಯಿಸಿದ್ದೆ. ಕೆಎಲ್ಇ ಒಂದು ಸೊಸೈಟಿ, ಸೊಸೈಟಿಗೆ ಆಸ್ತಿಯನ್ನು ನೀಡಿದ್ದಾರೆ. ಯಾವುದೋ ಕುಟುಂಬಕ್ಕೆ, ವೈಯಕ್ತಿಕವಾಗಿ ನೀಡಿಲ್ಲ. ಕುಟುಂಬಕ್ಕೆ ನೀಡಿದರೆ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತಿತ್ತು ಎಂದು ದಿಂಗಾಲೇಶ್ವರ ಸ್ವಾಮೀಜಿ ಟೀಕೆಗೆ ಮರು ಉತ್ತರ‌ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.