ETV Bharat / state

'ಮುಂದೆ ಅಂಗಿ, ಚೊಣ್ಣನೂ ಬಿಚ್ಚಿಸಬಹುದು' - ಸಂಗಮೇಶ್​ ಸ್ಪೀಕರ್​​​ಗೆ ಧಮ್ಕಿ

ಸಂಗಮೇಶ​ ಅವರನ್ನು ಇಡಿ ಅಧಿವೇಶನ ಪೂರ್ತಿ ಅಮಾನತು ಮಾಡಬೇಕು. ಸಮರ್ಥನೆ ಮಾಡೋ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ಸಂಗಮೇಶ​ ಸ್ಪೀಕರ್​​​ಗೆ ಧಮ್ಕಿ ಹಾಕೋದು ಬಿಡಬೇಕು. ಅದು ಭದ್ರಾವತಿಯಲ್ಲಿ ಮಾತ್ರ ನಡೆಯುತ್ತೆ, ಅಸೆಂಬ್ಲಿಯಲ್ಲಿ ನಡೆಯಲ್ಲ ಎಂದು ಶೆಟ್ಟರ್ ಹೇಳಿದರು.

Minister Jagdish Shetter
ಸಚಿವ ಜಗದೀಶ್ ಶೆಟ್ಟರ್
author img

By

Published : Mar 6, 2021, 3:30 PM IST

ಹುಬ್ಬಳ್ಳಿ: ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ವಿಡಿಯೋ ವೈರಲ್ ಹಿನ್ನೆಲೆ, ಆರು ಸಚಿವರು ಸುದ್ದಿ ಪ್ರಸಾರ ತಡೆಕೋರಿ ಕೋಟ್೯ಗೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

ಓದಿ: ಪ್ರತಿಭಟನೆ, ರ‍್ಯಾಲಿಗಳಿಂದ ಟ್ರಾಫಿಕ್ ಜಾಮ್​: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಹೈಕೋರ್ಟ್

ನಗರದಲ್ಲಿಂದು ಮಾತನಾಡಿದ ಅವರು, ಅಪಪ್ರಚಾರ ಆಗಬಾರದು ಅಂತ ಕೋಟ್೯ ಮೊರೆ ಹೋಗಿದ್ದಾರೆ. ಅದು ಅವರ ವೈಯುಕ್ತಿಕ ವಿಚಾರ. ಈಗಿನ ಕಾಲದಲ್ಲಿ ಅಪಪ್ರಚಾರ ಆದ ನಂತರ ಏನೂ ಮಾಡೋಕ್ಕಾಗಲ್ಲ. ಅದಕ್ಕೆ ಅವರು ಮೊದಲೇ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

ಸದನದಲ್ಲಿ ಕಾಂಗ್ರೆಸ್ ಶಾಸಕ ಸಂಗಮೇಶ ಅಂಗಿ ಬಿಚ್ಚಿದ ವಿಚಾರವಾಗಿ ಮಾತನಾಡಿದ ಅವರು, ಸಂಗಮೇಶ​ ಅವರನ್ನು ಇಡೀ ಅಧಿವೇಶನ ಪೂರ್ತಿ ಅಮಾನತು ಮಾಡಬೇಕು. ಸಮರ್ಥನೆ ಮಾಡೋ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ಸಂಗಮೇಶ​ ಸ್ಪೀಕರ್​​​ಗೆ ಧಮ್ಕಿ ಹಾಕೋದು ಬಿಡಬೇಕು. ಅದು ಭದ್ರಾವತಿಯಲ್ಲಿ ಮಾತ್ರ ನಡೆಯುತ್ತೆ, ಅಸೆಂಬ್ಲಿಯಲ್ಲಿ ನಡೆಯಲ್ಲ.

ಸ್ಪೀಕರ್​​ಗೆ ಕ್ಷಮೆ ಕೇಳಬೇಕಿತ್ತು, ಸ್ಪಿಕರ್​​​ಗೆ ಅಗೌರವ ತೋರಿದರೆ ಹಕ್ಕು ಚ್ಯುತಿ ಆಗುತ್ತೆ ಎಂದು ಕಿಡಿಕಾರಿದರು. ‌‌‌ಸಿದ್ದರಾಮಯ್ಯ ಬರೀ ಶಟ್೯ ಬಿಚ್ಚಿದ್ದಾರೆ ಅಂತಾರೆ. ಮುಂದೆ ಅಂಗಿ ಚೊಣ್ಣನೂ ಬಿಚ್ಚಿಸಬಹುದು, ನಾಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.