ETV Bharat / state

ಮಹದಾಯಿ ವಿಷಯದಲ್ಲಿ ರಾಜ್ಯ ಕಾಂಗ್ರೆಸ್, ಗೋವಾ ಕಾಂಗ್ರೆಸ್​​ನ್ನ ಛೂ ಬಿಡುತ್ತಿದೆ : ಶೆಟ್ಟರ್ ಆರೋಪ

ಬಿಜೆಪಿ ಮತ್ತು ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಒಂದಾಗಿ ಕೆಲಸ ಮಾಡಬೇಕಿದೆ. ಆಗ ಐದೇ ನಿಮಿಷದಲ್ಲಿ ವಿವಾದ ಬಗೆ ಹರಿಯುತ್ತದೆ..

Minister Jagadish Shettar Reaction about Dinesh Gundurao Statement In Dharwad
ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
author img

By

Published : Nov 1, 2020, 12:14 PM IST

Updated : Nov 1, 2020, 12:29 PM IST

ಧಾರವಾಡ : ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ವಿಚಾರಕ್ಕೆ ನಗರದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.

ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ದಿನೇಶ್ ಗುಂಡೂರಾವ್ ಈ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು. ದಿನೇಶ್ ಗುಂಡೂರಾವ್ ಈ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಾಗೂ ಸಿದ್ದರಾಮಯ್ಯ​ ನಿಲುವು ಏನು ಎಂಬುದನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾಂಗ್ರೆಸ್ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಆರೋಪ

ಮಹದಾಯಿ ಬಗ್ಗೆ ಹೆಚ್ ಕೆ ಪಾಟೀಲ್​​ರು ಬಹಳ ಮಾತನಾಡುತ್ತಾರೆ. ಈಗ ಅವರದೇ ಪಕ್ಷದ ದಿನೇಶ್ ಗುಂಡೂರಾವ್ ಬಗ್ಗೆ ಅವರು ಏನು ಹೇಳುತ್ತಾರೆ. ಗುಂಡೂರಾವ್ ಹೇಳಿಕೆ ಖಂಡಿಸ್ತಿರೋ ಅಥವಾ ಏನ್ ಮಾಡತ್ತೀರಾ ಎನ್ನುವ ಬಗ್ಗೆ ರಾಜ್ಯ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಒಂದಾಗಿ ಕೆಲಸ ಮಾಡಬೇಕಿದೆ. ಆಗ ಐದೇ ನಿಮಿಷದಲ್ಲಿ ವಿವಾದ ಬಗೆ ಹರಿಯುತ್ತದೆ. ಆದರೆ, ಕರ್ನಾಟಕ ಕಾಂಗ್ರೆಸ್, ಗೋವಾ ಕಾಂಗ್ರೆಸ್ ಛೂ ಬಿಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

Last Updated : Nov 1, 2020, 12:29 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.