ಧಾರವಾಡ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಅತಂತ್ರ ರಾಜಕಾರಣಿಯಾಗಿದ್ದಾರೆ. ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಅವರಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ನೆಲೆ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಚುನಾವಣಾ ಕ್ಷೇತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ನಿರ್ದಿಷ್ಟ ಕ್ಷೇತ್ರದಲ್ಲಿ ನೆಲೆ ಇಲ್ಲದಂತಾಗಿದೆ. ಅವರ ಪಕ್ಷದ ಎಲ್ಲರ ಪರಿಸ್ಥಿತಿ ಇದೇ ರೀತಿ ಆಗಿದೆ ಎಂದು ನಾನು ಭಾವಿಸಿದ್ದೇನೆ ಎಂದರು.
ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ವಾಪಸ್ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಬರೀ ಕಲ್ಪನೆ ಅಷ್ಟೇ. ಎಲ್ಲವೂ ಕಪೋತ ಕಲ್ಪಿತ. ಯಾರು ಹೋಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಎಲ್ಲರೂ ಮಾಧ್ಯಮಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಸಹಕಾರ ಸಪ್ತಾಹಕ್ಕೆ ಬಾರದೇ ಇರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಮನೆಯಲ್ಲಿ ಒಬ್ಬರು ನಿಧನರಾಗಿದ್ದಾರೆ. ಅದಕ್ಕೆ ನಿನ್ನೆ ಕೂಡಾ ಅವರು ಬಂದಿಲ್ಲ.ಇವತ್ತು ಬಂದಿಲ್ಲ. ಉಳಿದವರು ಇವತ್ತು ಕಾರ್ಯಕ್ರಮದಲ್ಲಿ ಬಂದಿದ್ದಾರೆ. ಸಹಕಾರ ಸಪ್ತಾಹಕ್ಕೆ ಸಿಎಂ ಅವರು ನಿನ್ನೆ ಚಾಲನೆ ಕೊಟ್ಟಿದ್ದಾರೆ. ಇವತ್ತು ಎರಡನೇ ದಿನದ ಕಾರ್ಯಕ್ರಮ ಧಾರವಾಡದಲ್ಲಿ ಮಾಡುತ್ತಿದ್ದೇವೆ. ಮೊದಲು ಕೆಎಂಎಫ್ ನಲ್ಲಿ ಕೇವಲ 30 ಉತ್ಪನ್ನಗಳಿದ್ದವು. ಸದ್ಯ 140 ಆಗಿವೆ ಎಂದು ತಿಳಿಸಿದರು.
ಇದನ್ನೂ ಓದಿ :ಧಾರವಾಡ: ಶಾಸಕ ಅರವಿಂದ್ ಬೆಲ್ಲದ ಭಾವಚಿತ್ರಕ್ಕೆ ಹಾಲೆರೆದು ರಸ್ತೆ ಸುಧಾರಣೆಗೆ ಆಗ್ರಹ