ETV Bharat / state

'ರಾಜ್ಯದಲ್ಲಿ ಬಂದ್ ಮಾಡುವ ಪರಿಸ್ಥಿತಿ ಇಲ್ಲ, ಒತ್ತಾಯ ಮಾಡಿ ಬಂದ್‌ ಮಾಡಿದ್ರೆ ಕಠಿಣ ಕ್ರಮ'

ಎಂಇಎಸ್ ನಿಷೇಧ ಮಾಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಬ್ಯಾನ್ ಅನ್ನೋದಕ್ಕಿಂತ ನಮ್ಮವರು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ತಾವೇನು ಎಂದು ತೋರಿಸಿದ್ದಾರೆ. ಯಾರೋ ಪುಂಡರು ಮಾಡಿದ ಕೆಲಸ ಅದು. ಈಗಲೇ ಮಾಡಿ,ಇವತ್ತೇ ಮಾಡಿ ಅಂತ ಡೆಡ್ ಲೈನ್ ಕೊಟ್ರೆ ಹೇಗಾಗುತ್ತೆ?- ಗೃಹ ಸಚಿವ ಆರಗ ಜ್ಞಾನೇಂದ್ರ.

ಹುಬ್ಬಳ್ಳಿಯಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

author img

By

Published : Dec 29, 2021, 2:26 PM IST

ಹುಬ್ಬಳ್ಳಿ: ಬಂದ್ ಮಾಡೋ ಪರಿಸ್ಥಿತಿ ರಾಜ್ಯದಲ್ಲಿಲ್ಲ. ರಾಜ್ಯ ಸರ್ಕಾರ ಈಗಾಗಲೇ ದಿಟ್ಟ ಕ್ರಮ‌ಗಳನ್ನು ಕೈಗೊಂಡಿದೆ. ಕೋವಿಡ್​​ನಿಂದ ಬೀದಿಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಮಾಡಬಾರದು. ಕನ್ನಡಪರ ಚಳವಳಿಗಾರರು ಎನ್ನಿಸಿಕೊಂಡವರು ಹತ್ತು ಬಾರಿ ಯೋಚನೆ ಮಾಡಲಿ. ಒಂದು ವೇಳೆ, ಒತ್ತಾಯ ಮಾಡಿ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ಕಾರ್ಯಕಾರಿಣಿ ಸಭೆಯ ಬಳಿಕ ಮಾತನಾಡಿದ ಅವರು, ಎಂಇಎಸ್ ನಿಷೇಧ ಮಾಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಬ್ಯಾನ್ ಅನ್ನೋದಕ್ಕಿಂತ ನಮ್ಮವರು ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ತಾವೇನು ಎಂದು ತೋರಿಸಿದ್ದಾರೆ. ಯಾರೋ ಪುಂಡರು ಮಾಡಿದ ಕೆಲಸ ಅದು. ಈಗಲೇ ಮಾಡಿ,ಇವತ್ತೇ ಮಾಡಿ ಅಂತ ಡೆಡ್ ಲೈನ್ ಕೊಟ್ರೆ ಹೇಗಾಗುತ್ತೆ?. ಈಗಾಗಲೇ‌ ಮಹಾರಾಷ್ಟ್ರದ ಸರ್ಕಾರದ ಜೊತೆಗೂ ಮಾತನಾಡಿದ್ದೇವೆ‌. ಕನ್ನಡ ಪರ ಹೋರಾಟಗಾರರು ಬಂದ್ರೆ ಸಿಎಂ ಅವರ ಜೊತೆ ಮಾತನಾಡೋಕೆ ಸಿದ್ದ. ಹಾಗಾಗಿ, ನಾಳೆ ಬಂದ್ ಕೈ ಬಿಡಬೇಕು ಎಂದು ಸಚಿವರು ಮನವಿ ಮಾಡಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.