ETV Bharat / state

ನಾಳೆ ರೈತಸಂಘಟನೆಗಳಿಂದ ಬಂದ್​​ : ಹುಬ್ಬಳ್ಳಿಯಲ್ಲಿ ಚಿಂತನಾ ಸಭೆ - ಕರ್ನಾಟಕ ಬಂದ್​​​

ನಾಳೆ ನಡೆಯುವ ರೈತ ಸಂಘಟನೆಗಳ ಪ್ರತಿಭಟನೆ ಬಗ್ಗೆ ಹುಬ್ಬಳ್ಳಿಯ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಾಳೆ ಕರ್ನಾಟಕ ಬಂದ್ ಮಾಡುವ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.

Meeting of Farmer Leaders in Hubli
ನಾಳೆ ರೈತಸಂಘಟನೆಗಳ ಪ್ರತಿಭಟನೆ : ಹುಬ್ಬಳ್ಳಿಯಲ್ಲಿ ಚಿಂತನಾ ಸಭೆ
author img

By

Published : Sep 27, 2020, 4:51 PM IST

ಹುಬ್ಬಳ್ಳಿ : ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ನಾಳೆ ರೈತ ಸಂಘ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಚಿಂತನಾ ಸಮಾವೇಶ ನಡೆಸಲಾಯಿತು.

ನಾಳೆ ರೈತಸಂಘಟನೆಗಳ ಪ್ರತಿಭಟನೆ : ಹುಬ್ಬಳ್ಳಿಯಲ್ಲಿ ಚಿಂತನಾ ಸಭೆ

ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನಾಳೆ ಕರ್ನಾಟಕ ಬಂದ್ ಮಾಡುವ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ರೈತರಪರ, ಕಾರ್ಮಿಕರ ಸಂಘ ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗಿಯಾಗಿ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಿದವು.

ಚಿಂತನಾ ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಹಲವು ಜನಪ್ರತಿನಿಧಿಗಳು ಭಾಗಿಯಾಗಿ ನಾಳೆ ಕರ್ನಾಟಕ ಬಂದ್​ಬೆಂಬಲ ಸೂಚಿಸುವುದರ ಜೊತೆಗೆ ಬಂದ್ ಯಶಸ್ವಿಗೊಳಿಸುವ ನಿರ್ಧಾರ ತಗೆದುಕೊಳ್ಳಲಾಯಿತು.

ಸುಮಾರು 20ಕ್ಕು ಹೆಚ್ಚು ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿದ್ದು, ಸಾರಿಗೆ ಸೇರಿದಂತೆ ಅಂಗಡಿ‌ಮುಂಗಟ್ಟುಗಳನ್ನು ಬಂದ್ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ತೀರ್ಮಾನಕ್ಕೆ ಬರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.