ಧಾರವಾಡ : ಮೆಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿಯೋರ್ವರು ಹೃದಯಾಘಾತದಿಂದ ಸೌದಿಯ ಮೆಕ್ಕಾದಲ್ಲಿ ನಿಧನ ಹೊಂದಿರುವ ಘಟನೆ ನಡೆದಿದೆ. ಮೃತರನ್ನು ಜಿಲ್ಲೆಯ ವರವ ನಾಗಲಾವಿಯ ಸೈಯದ್ ದಾದಾಪೀರ ಪೀರಜಾದೆ (70) ಎಂದು ಗುರುತಿಸಲಾಗಿದೆ.
ಕಳೆದ ಅ.9 ರಂದು ಧಾರವಾಡದಿಂದ ಉಮ್ರಾಗಾಗಿ ಪೀರಜಾದೆ ಸೌದಿಗೆ ತೆರಳಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ಗುರುಗಳು ಆಗಿದ್ದ ದಾದಾಪೀರ ಪೀರಜಾದೆ ಇವರ ಜೊತೆಯಲ್ಲಿ ಕುಟುಂಬದ ಕೆಲ ಸದಸ್ಯರು ಕೂಡಾ ಹೋಗಿದ್ದರು ಎನ್ನಲಾಗಿದೆ. ಪೀರಜಾದೆ ಅವರ ಅಂತ್ಯಕ್ರಿಯೆ ಮೆಕ್ಕಾದಲ್ಲೇ ಕುಟುಂಬಸ್ಥರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್, ಅಪಾರ ಬೆಳೆಹಾನಿ