ETV Bharat / state

ಶಾಸಕ ಬೆಲ್ಲದ್​ಗೆ ಸ್ವಪಕ್ಷದಲ್ಲೇ ಎದುರಾಳಿ: ಬಿಜೆಪಿ ಟಿಕೆಟ್​ಗೆ ತನ್ನನ್ನು ಪರಿಗಣಿಸುವಂತೆ ಮೇಯರ್ ಅಂಚಟಗೇರಿ ಮನವಿ!

ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಹು-ಧಾ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಮನವಿ ಮಾಡಿದ್ದಾರೆ.

MLA Arvind Bellad, Mayor Eresha Anchatageri
ಶಾಸಕ ಅರವಿಂದ ಬೆಲ್ಲದ್​, ಮೇಯರ್ ಈರೇಶ ಅಂಚಟಗೇರಿ
author img

By

Published : Mar 23, 2023, 5:28 PM IST

ಧಾರವಾಡ: ಮುಖ್ಯಮಂತ್ರಿ ರೇಸ್ ನಲ್ಲಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸ್ವಪಕ್ಷದಲ್ಲೇ ಸ್ಪರ್ಧಿಗಳು ಎದುರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಿ ಎಂದು ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನನಗೆ ಟಿಕೆಟ್ ಕೊಡಿ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಮನವಿ ಮಾಡಿದ್ದಾರೆ. ಈಗಾಗಲೇ ಬಿಜೆಪಿಯಿಂದ ಬೆಲ್ಲದ್ ಕುಟುಂಬಕ್ಕೆ ಕಳೆದ 30 ವರ್ಷಗಳಿಂದ ಟಿಕೆಟ್ ನೀಡುತ್ತಾ ಬಂದಿರುತ್ತದೆ. ಈ ಬಾರಿ ಬೆಲ್ಲದ್ ಕುಟುಂಬಕ್ಕೆ ಟಿಕೆಟ್ ತಪ್ಪಿಸಲು ಸ್ಥಳೀಯ ನಾಯಕರು ಕಸರತ್ತು ನಡೆಸಿರುವುದು ಇದರಿಂದ ಮೇಲ್ನೋಟಕ್ಕೆ ಕಂಡುಬಂದಿದೆ.

ನನಗೂ ಒಂದು ಅವಕಾಶ ನೀಡಿ ಎಂದು ಪಾಲಿಕೆ ಮೇಯರ್ ಮನವಿ ಮಾಡಿಕೊಂಡಿದ್ದಾರೆ. 30 ವರ್ಷಗಳಿಂದ ಅಂಚಟಗೇರಿ ಸಕ್ರಿಯ ಕಾರ್ಯಕರ್ತನಾಗಿದ್ದಾರೆ. ಈ ಹಿನ್ನೆಲೆ ಈ ಬಾರಿ ನನಗೆ ಟಿಕೆಟ್ ನೀಡಿ ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ. ಅಂಚಟಗೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅತ್ಯಾಪ್ತರಾಗಿದ್ದಾರೆ.‌‌‌‌

ಇದೀಗ ನಾಯಕರ ಜೊತೆ ಚರ್ಚೆ ಮಾಡಿ ಟಿಕೆಟ್​ಗಾಗಿ ಅಂಚಟಗೇರಿ ಬೇಡಿಕೆ ಇಟ್ಟಿದ್ದಾರೆ.‌ ಧಾರವಾಡ ಪಶ್ಚಿಮ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಈಗಾಗಲೇ ಅಂಚಟಗೇರಿ ಟಿಕೆಟ್ ಕೇಳುತ್ತಿದ್ದಾರೆ ಎಂದು ಗುಮಾನಿ ಎದ್ದಿತ್ತು. ಇದೀಗ ಮೇಯರ್ ಮನವಿ ಪತ್ರ ಬರೆದು ಟಿಕೆಟ್ ಕೇಳಿರುವುದು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲಾ ಎಂಬುದನ್ನು ಬಹಿರಂಗ ಪಡಿಸಿದಂತಾಗಿದೆ. ಒಟ್ಟಿನಲ್ಲಿ ಶಾಸಕ ಅರವಿಂದ ಬೆಲ್ಲದ್ ಸ್ವಪಕ್ಷದಲ್ಲಿ ವಿರೋಧಿಗಳು ಎದುರಾಗಿದ್ದಾರೆ.

ಶಾಸಕ ಬೆಲ್ಲದ್ ಡಿಕೆಶಿ ಭೇಟಿ ಉಹಾಪೋಹ- ಜೋಶಿ.. ಶಾಸಕ ಅರವಿಂದ ಬೆಲ್ಲದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿರುವುದು ಕೇವಲ ಊಹಾಪೋಹ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗೆ ಹೇಳಿದ್ದರು. ಇಂಥ ಊಹಾಪೋಹಗಳು ಮೊದಲಿಂದಲೂ ಇವೆ. ಶಾಸಕ ಅರವಿಂದ ಬೆಲ್ಲದ್ ಅವರು ನನ್ನೊಂದಿಗೆ ಮಾತಾಡಿದ್ದಾರೆ ಎಂದು ಸ್ಪಷ್ಟಪಪಡಿಸಿದ್ದರು.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜೋಶಿ, ಅದೆಲ್ಲವೂ ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಲಿಂಗಾಯತರ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ್ದ ಜೋಶಿ, ಅದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅದೊಂದು ಬೋಗಸ್ ವಿಡಿಯೋ. ಈಗಾಗಲೇ ಅದರ ಬಗ್ಗೆ ಫ್ಯಾಕ್ಟ್ ಚೆಕ್ ಆಗಿದೆ. ಕಾಂಗ್ರೆಸ್‌ನವರು ಇಂಥ ಫೇಕ್ ವಿಡಿಯೋ ಹರಿಬಿಟ್ಟು ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಅನೇಕ ಮಾಧ್ಯಮಗಳಲ್ಲಿ ಅದು ಫೇಕ್ ಅನ್ನೋದು ಬಂದಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.

ಸಿ ಟಿ ರವಿ ಪ್ರಬುದ್ಧ ರಾಜಕಾರಣಿ, ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರು ಈ ರೀತಿ ಹೇಳಲು ಸಾಧ್ಯವೇ ಇಲ್ಲ. ನಮಗೆ ಎಲ್ಲ ಸಮುದಾಯಗಳ ಬಗ್ಗೆ ಗೌರವ ಇದೆ. ವಿಶೇಷವಾಗಿ ಲಿಂಗಾಯತರ ಬಗ್ಗೆ ಗೌರವವಿದೆ ಅಂತಾ ಸಚಿವ ಜೋಶಿ ಹೇಳಿದ್ದರು.

ಇದನ್ನೂಓದಿ:ನಮ್ಮ ಶಾಸಕರು ಯಾರೂ ಪಕ್ಷ ಬಿಡುವುದಿಲ್ಲ: ಬಿ.ಎಸ್.ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.