ETV Bharat / state

ಧಾರವಾಡದಲ್ಲಿ ಗಾಂಜಾ ಮಾರಾಟ: 6 ಜನರ ಬಂಧನ - DCP Krishnakantha statement

ಧಾರವಾಡದ ನುಚ್ಚಂಬ್ಲಿ ಬಾವಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಕೃಷ್ಣಕಾಂತ ತಿಳಿಸಿದ್ದಾರೆ.

marijuana Sale in Dharwad
ಧಾರವಾಡದಲ್ಲಿ ಗಾಂಜಾ ಮಾರಾಟ: 6 ಜನರ ಬಂಧನ
author img

By

Published : Sep 7, 2020, 1:09 PM IST

Updated : Sep 7, 2020, 1:21 PM IST

ಧಾರವಾಡ: ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ ಹೇಳಿದರು.

ಧಾರವಾಡದಲ್ಲಿ ಗಾಂಜಾ ಮಾರಾಟ: 6 ಜನರ ಬಂಧನ

ಜೈಭೀಮ ನಗರದ ಪೃಥ್ವಿ ಕೊಂಡಪಲ್ಲಿ, ಸೌದಾಗರ ಚಾಳದ ಸತ್ಕಾರ ಮಾಡಲಗಿ, ಬಾರಾ ಇಮಾಮ ಗಲ್ಲಿಯ ಜಾವೀದ್​​ ಅಹ್ಮದ ಬಾದಾಮಿ, ನಿಜಾಮುದ್ದಿನ್​​ ಕಾಲೋನಿಯ ಮೆಹಬೂಬ್ ಸಾಬ್, ಮಸಾಲಗಾರ ಓಣಿಯ ಮಹ್ಮದ್​​ ಸಾಧಿಕ ಖತೀಬ, ಹತ್ತಿಕೊಳ್ಳದ ಮದ್ಮದ ಸಾಧಿಕ, ರಾಜೇಸಾಬ ಹಂಚಿನಾಳ ಬಂಧಿತ ಆರೋಪಿಗಳು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 3 ಕೆಜಿ ಒಂದು ಗ್ರಾಂ ಗಾಂಜಾ, ಒಂದು ಯಮ್ಹಾ ಎಫ್ ಜೆಡ್ ಬೈಕ್ ಹಾಗೂ ಒಂದು ಕಾರು ಸೇರಿದಂತೆ 8 ಲಕ್ಷದ 57 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳು ಧಾರವಾಡದ ನುಚ್ಚಂಬ್ಲಿ ಬಾವಿ ಹತ್ತಿರ ಗಾಂಜಾ ಮಾರಾಟ ಮಾಡಲು ನಿಂತಾಗ ದಾಳಿ ಮಾಡಲಾಗಿದೆ. ಆರೋಪಗಳನ್ನು ಬಂಧಿಸಿದ ಪೊಲೀಸರಿಗೆ ಡಿಸಿಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Last Updated : Sep 7, 2020, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.