ETV Bharat / state

ಅಕ್ರಮ ಗಾಂಜಾ ಮಾರಾಟ... ನಾಲ್ವರು ಆರೋಪಿಗಳ ಬಂಧನ - ಗಾಂಜಾ ಮಾರಾಟ

ಹುಬ್ಬಳ್ಳಿಯಲ್ಲಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಗಾಂಜಾ ಆರೋಪಿಗಳ ಬಂಧನವಾಗಿದೆ. ಬಂಧನ ವೇಳೆ 1436 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಈ ಕುರಿತು ಡಿಸಿಪಿ ಕೃಷ್ಣಕಾಂತ ಮಾಹಿತಿ ನೀಡಿದ್ದಾರೆ.

marijuana accuses arrested in hubli
ನಾಲ್ವರು ಆರೋಪಿಗಳ ಬಂಧನ
author img

By

Published : Sep 7, 2020, 9:55 PM IST

ಹುಬ್ಬಳ್ಳಿ: ಅವಳಿನಗರ ಪೊಲೀಸರು ಗಾಂಜಾ ಹಾವಳಿ ತಪ್ಪಿಸಲು ಮತ್ತೆ ದಾಳಿ ನಡೆಸಿದ ಪೊಲೀಸರು ಕೇಶ್ವಾಪುರ ಠಾಣೆ ಹಾಗೂ ಗೋಕುಲ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ.

ನಾಲ್ವರು ಆರೋಪಿಗಳ ಬಂಧನ

ದಾಳಿ ವೇಳೆ 1436 ಗ್ರಾಂ ಗಾಂಜಾ ಪತ್ತೆ ಹಚ್ಚಿದ್ದು, ನಾಲ್ವರನ್ನ ಬಂಧನ ಮಾಡಿದ್ದಾರೆ. ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾರಿಹಾಳ ಗ್ರಾಮದ ಇಮಾಮ್​ ಹುಸೇನ್​ ಬಿಜಾಪುರ ಎಂಬ ಆರೋಪಿಯನ್ನ ಬಂಧಿಸಿ, ಆತನಿಂದ 836 ಗ್ರಾಂ ಗಾಂಜಾ ಹಾಗೂ 400 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಕುರಿ ಮೇಯಿಸುತ್ತಿದ್ದ ಆರೋಪಿ ಬಂಧನವಾಗಿದ್ದು , ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಮೂವರನ್ನ ಬಂಧಿಸಿ 600 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನ ಗಾಂಧಿವಾಡಾದ ಯಶವಂತ ಮುನಿಗೇಟ್, ಫೆಸಿಪಿಕ್ ಪಾರ್ಕ್ ರಸ್ತೆಯ ಪ್ರಶಾಂತ ಲಾಜರಸ ಮತ್ತು ಚಾಲುಕ್ಯನಗರದ ನೆಲ್ಸನ್ ಮೈಲಾ ಗುರುತಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳ ಬಗ್ಗೆ ಡಿಸಿಪಿ ಕೃಷ್ಣಕಾಂತ ಮಾಹಿತಿ ನೀಡಿದ್ದು ಅವಳಿ ನಗರಗಳನ್ನು ಗಾಂಜಾ ಮುಕ್ತ ಮಾಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.