ETV Bharat / state

ಅಪರಾಧ ವಿರೋಧಿಸಿ ಅಪರಾಧಿಯನ್ನಲ್ಲ: ಐಜಿಪಿ ರಾಘವೇಂದ್ರ ಸುಹಾಸ್ - Hubli

ಅಪರಾಧವನ್ನು ವಿರೋಧಿಸಿ, ಆದರೆ ಅಪರಾಧಿಗಳನ್ನಲ್ಲ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಹೆಚ್.ಜಿ.ರಾಘವೇಂದ್ರ ಸುಹಾಸ್ ಹೇಳಿದರು.

Marchpast Program
ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
author img

By

Published : Jan 30, 2021, 4:23 PM IST

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್​​ನ ಪೊಲೀಸ್ ತರಬೇತಿ ಶಾಲೆಯ ವತಿಯಿಂದ 7ನೇ ತಂಡದ ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಹೆಚ್​.ಜಿ.ರಾಘವೇಂದ್ರ ಸುಹಾಸ್ ಚಾಲನೆ ನೀಡಿದರು.

ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಈ ವೇಳೆ ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥ ಸಂಚಲನದ ಮೂಲಕ ಗೌರವ ಸಮರ್ಪಣೆ ಮಾಡಿದರು. ಬಳಿಕ ಮಾತನಾಡಿದ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಹೆಚ್​. ಜಿ.ರಾಘವೇಂದ್ರ ಸುಹಾಸ್, ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ಉತ್ತಮ ತರಬೇತಿ ‌ನೀಡಿದ್ದಾರೆ. ದೇಶಕ್ಕೆ ಬಾರ್ಡರ್ ಎಷ್ಟು ಮುಖ್ಯವೋ ದೇಶದ ಒಳಗೆ ಜೈಲ್ ವಾರ್ಡರ್​​ ಕೂಡ ಅಷ್ಟೇ ಮುಖ್ಯ. ನಾವೆಲ್ಲ 'ಅಪರಾಧವನ್ನು ವಿರೋಧಿಸುತ್ತೇವೆ, ಅಪರಾಧಿಗಳನ್ನಲ್ಲ' ಎಂಬ ಘೋಷ ವಾಕ್ಯವನ್ನು ಎಲ್ಲ ವಾರ್ಡರ್​​ಗಳು ಕೂಡ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಿವ್ಹೀಜ್ ಆರ್ಡರ್, ರಾಷ್ಟ್ರ ಧ್ವಜ ಹಾಗೂ ಪೊಲೀಸ್ ಧ್ವಜ ಆಗಮನ, ಪ್ರತಿಜ್ಞಾವಿಧಿ ಸ್ವೀಕಾರ, ಧ್ವಜಗಳ ನಿರ್ಗಮನ,ಬಹುಮಾನ ವಿತರಣೆ ಸೇರಿದಂತೆ ಹಲವಾರು ಕಾರ್ಯವನ್ನು ನೆರವೇರಿಸಲಾಯಿತು.

ಜಿಲ್ಲಾ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಹು-ಧಾ ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿ ಕೆ.ರಾಮರಾಜನ್, ಆರ್.ಬಿ.ಬಸರಗಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.