ಹುಬ್ಬಳ್ಳಿ: ಫೋಟೋಶೂಟ್ಗೆ ಹೋಗಿ ತಾಲೂಕಿನ ಕಿರೇಸೂರು ಕಾಲುವೆಯಲ್ಲಿ ಬಿದ್ದಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ಓರ್ವ ಯುವತಿ ಸೇರಿದಂತೆ ಐವರು ಕಿರೇಸೂರು ಬ್ರಿಡ್ಜ್ ಬಳಿ ಫೋಟೋಶೂಟ್ಗೆ ತೆರಳಿದ್ದರು. ಆಗ ಹೆಜ್ಜೇನು ದಾಳಿ ಮಾಡಿದ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲುವೆಯಲ್ಲಿ ಬಿದ್ದಿದ್ದರು.
ನೀರಿನಲ್ಲಿ ಮುಳುಗುತ್ತಿದ್ದ ಯುವತಿ ನತಾಶಾಳನ್ನು ಕುರಿಗಾಹಿಗಳು ರಕ್ಷಣೆ ಮಾಡಿದ್ದಾರೆ. ಮೂವರು ಯುವಕರ ಪೈಕಿ ಅಗ್ನಿ ಶಾಮಕ ಸಿಬ್ಬಂದಿಯ ನಿರಂತರ ಶೋಧದಿಂದ ನಿನ್ನೆ ಸನ್ನಿ ಜಾನ್ಸನ್ ಕಲ್ಲಕುಂಟ್ಲ ಹಾಗೂ ಗಜಾನನ ರಾಜಶೇಖರ ಮೃತದೇಹಗಳು ಪತ್ತೆಯಾಗಿದ್ದವು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ಸಿಬ್ಬಂದಿಗೆ ಜೋಶಿ ಕ್ಲೆಮೆಂಟ್ ಯುವಕನ ಶವ ದೊರಕಿದೆ.
ಕೆನಾಲ್ನಲ್ಲಿರುವ ಟರ್ನಲ್ನಲ್ಲಿ ಯುವಕನ ದೇಹ ಸಿಲುಕಿಕೊಂಡಿತ್ತು. ಕೆಸರಿನಲ್ಲಿ ಸಿಲುಕಿಕೊಂಡಿದ್ದ ಶವವನ್ನು ಈಗ ಹೊರತಗೆಯಲಾಗಿದೆ. ನೀರಿನಲ್ಲಿ ಮುಳುಗಿದ್ದ ಮೂವರ ಶವಗಳು ಸಿಕ್ಕಿದ್ದು, ಮೂರು ದಿನಗಳ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಸೆಲ್ಫಿ ಕ್ರೇಜ್ಗೆ ಮೂವರು ಕಾಲುವೆ ಪಾಲು: ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ