ETV Bharat / state

ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಎರಗಿತು ಹುಚ್ಚು ನಾಯಿ: ಬಾಲಕಿಗೆ ಗಂಭೀರ ಗಾಯ - ಮಗು ಮೇಲೆ ಹುಚ್ಚು ನಾಯಿ ದಾಳಿ

ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಕಂದಮ್ಮನಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಹುಚ್ಚು ನಾಯಿ ಕಡಿದು ಮಗುವಿಗೆ ಗಾಯ: ಮಗುವಿನ ಸ್ಥಿತಿ ಗಂಭೀರ
author img

By

Published : Oct 17, 2019, 1:37 PM IST

ಧಾರವಾಡ: ಮನೆಯ ಮುಂದೆ ಆಟವಾಡುತ್ತಿದ್ದ ಕಂದಮ್ಮನ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದಿದೆ.

ಹುಚ್ಚು ನಾಯಿ ದಾಳಿಯಿಂದಾಗಿ ಬಾಲಕಿ ಸ್ಥಿತಿ ಗಂಭೀರವಾಗಿದೆ. ಅಷ್ಟಕ್ಕೆ ಸುಮ್ಮನಾಗದ ಹುಚ್ಚು ಶ್ವಾನವು ಎಮ್ಮೆ, ಆಡುಗಳಿಗೂ ಕಚ್ಚಿದ್ದು, ಆಡು ಸಾವನ್ನಪ್ಪಿದೆ.

ಇನ್ನು, ಸೋಮಾಪುರದಲ್ಲಿ ಕಳೆದ ಒಂದು ವಾರದಿಂದ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ, ಜನರನ್ನು ರಕ್ಷಿಸಿ ಎಂಬ ಒತ್ತಾಯ ಕೇಳಿಬಂದಿದೆ.

Intro:ಧಾರವಾಡ: ಮನೆಯ ಮುಂದೆ ಆಟವಾಡುತ್ತಿದ್ದ ಕಂದಮ್ಮನ ಮೇಲೆ ಹುಚ್ಚು ನಾಯಿಯೊಂದು ಕಡೆದು ಗಾಯಾಗೊಳಿಸಿರುವ
ಘಟನೆ ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದಿದೆ.

ಹುಚ್ಚು ನಾಯಿ ಕಡೆದ ಹಿನ್ನೆಲೆಯಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿದೆ. ಸಾನ್ವಿ ಪಕ್ಕೀರಗೌಡ ಪಾಟೀಲ ಎಂಬುವ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.Body:ಅಲ್ಲದೇ ಹುಚ್ಚು ನಾಯಿ ಎಮ್ಮೆ ಆಡುಗಳಿಗಳಿಗೆ ಕಚ್ಚಿದ್ದು, ಆಡು ಸಾವನ್ನಪ್ಪಿದೆ. ಅಲ್ಲದೇ ಸೋಮಾಪುರದಲ್ಲಿ ಕಳೆದ ವಾರದಿಂದ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯದಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.