ETV Bharat / state

ಕಿಮ್ಸ್ ಆವರಣದಲ್ಲಿ ಬಾಡೂಟ... ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಸಿಬ್ಬಂದಿ - Hubballi Kim's Hospital premises lunch celebration

ಸರ್ಕಾರಿ ಕ್ಯಾಂಪಸ್ ಅದರಲ್ಲೂ ಯಾವುದೇ ಆಸ್ಪತ್ರೆಯ ಆವರಣದಲ್ಲಿ ಬಾಡೂಟಕ್ಕೆ ಅವಕಾಶವಿಲ್ಲ. ಆದರೆ, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಸಿಬ್ಬಂದಿ ಬಾಡೂಟ ಸವಿದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

lunch-at-kims-premises outraged-by-the-public
ಕಿಮ್ಸ್ ಆವರಣದಲ್ಲಿ ಬಾಡೂಟ.
author img

By

Published : Dec 14, 2020, 3:37 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 60 ಕ್ಕೂ ಹೆಚ್ಚು ಸಿಬ್ಬಂದಿ ಬಾಡೂಟ ಸವಿದಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿ ಬಾಡೂಟ ಮಾಡಿ ಸವಿದಿದ್ದಾರೆ ಎನ್ನಲಾಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕಿಮ್ಸ್ ನ ಲೇಡಿಸ್ ಹಾಸ್ಟೆಲ್ ಹಿಂಭಾಗದಲ್ಲಿ ಕುರಿ, ಕೋಳಿ ಮಾಂಸದ ಅಡುಗೆ ತಯಾರಿಸಿ ಸುಮಾರು 60 ಮಂದಿ ಬಾಡೂಟ ಸವಿದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಓದಿ: ಕೋಡಿಹಳ್ಳಿ ಚಂದ್ರಶೇಖರ್ ಡ್ರಾಮಾ ಮಾಡುತ್ತಿದ್ದಾರೆ: ಎಸ್.ಟಿ. ಸೋಮಶೇಖರ್ ವಾಗ್ದಾಳಿ

ಸರ್ಕಾರಿ ಕ್ಯಾಂಪಸ್ ಅದರಲ್ಲೂ ಯಾವುದೇ ಆಸ್ಪತ್ರೆಯ ಆವರಣದಲ್ಲಿ ಇಂತಹ ಬಾಡೂಟಕ್ಕೆ ಅವಕಾಶವಿಲ್ಲ. ಆದ್ರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಿ ಊಟ ಆಯೋಜನೆ ಮಾಡಿದ್ದಾರೆ.‌

ಆಡಳಿತಾಧಿಕಾರಿ ಸಮರ್ಥನೆ, ಮರು ಪ್ರಶ್ನೆ

ಸಾರ್ವಜನಿಕರ ಕೆಂಗಣ್ಣಿನ ನಡುವೆ ಕಿಮ್ಸ್ ಆಡಳಿತಾಧಿಕಾರಿ ರಾಜೇಶ್ವರಿ ಜೈನಾಪುರ ಇದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಟಿವಿ ಭಾರತಕ್ಕೆ ಫೋನ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಊಟ ಹಾಕಲಾಗಿದೆ. ‌ಇದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ಬಂದವರು ಕಿಮ್ಸ್ ‌ನಲ್ಲಿ‌ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು. ಅಂತವರಿಗೆ ಊಟ ಹಾಕಿದ್ದು ತಪ್ಪಾ? ಎಂದು ಮರು ಪ್ರಶ್ನೆ ಹಾಕಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.