ETV Bharat / state

ಲಾಕ್​ಡೌನ್​ ಹಸಿವು: ಧಾರವಾಡದಲ್ಲಿ ಯುವಕರಿಂದ ಫುಡ್ ಕಿಟ್ ವಿತರಣೆ

ಸರ್ಕಾರದ ಲಾಕ್​ಡೌನ್​ ನಿರ್ಧಾರಕ್ಕೆ ತತ್ತರಿಸಿರುವ ಬಡ ಜನರ ಸಂಕಷ್ಟದ ಜೀವನ ಕಂಡು ಧಾರವಾಡದಲ್ಲಿ ಯುವ ಸಮೂಹದ ತಂಡವೊಂದು ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡಲು ಮುಂದಾಗಿದೆ.

lock-down-food-kit-distribution-by-youth-team-in-dharwad
ಧಾರವಾಡದಲ್ಲಿ ಯುವಕರಿಂದ ಫುಡ್ ಕಿಟ್ ವಿತರಣೆ
author img

By

Published : May 13, 2021, 5:44 PM IST

ಧಾರವಾಡ: ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ ಕಠಿಣ ಲಾಕ್​ಡೌನ್​ ಜಾರಿಗೊಳಿಸಿದೆ. ಹೀಗಾಗಿ ಹೊತ್ತಿನ ಊಟಕ್ಕೂ ದುಡಿಮೆಯನ್ನೇ ನಂಬಿ ಬದುಕುತ್ತಿದ್ದ ಅನೇಕ‌ ಬಡವರು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥವರನ್ನು ಕಂಡು ಮರುಗಿರುವ ಯುವ ಸಮೂಹವೊಂದು ನಗರದಲ್ಲಿ ಫುಡ್​ ಕಿಟ್ ವಿತರಿಸಲು ಮುಂದಾಗಿದೆ.

ಧಾರವಾಡದಲ್ಲಿ ಯುವಕರಿಂದ ಫುಡ್ ಕಿಟ್ ವಿತರಣೆ

ಹೊರಗೆ ಕೆಲಸವಿಲ್ಲ, ಮನೆಯಲ್ಲಿ ತಿನ್ನಲು ಧಾನ್ಯವಿಲ್ಲದ ಪರಿಸ್ಥಿತಿಯಲ್ಲಿರುವ ಬಡವರನ್ನು ಕಂಡಿರುವ ಯುವಕರು, ವಿವಿಧ ಸಾಮಗ್ರಿಗಳ ಕಿಟ್​ಗಳನ್ನು ಹಂಚುತ್ತಿದ್ದಾರೆ. ಈ ಯುವಕರ ಕೆಲಸವನ್ನು ನೋಡಿ ಮೆಚ್ಚಿರುವ ಅನೇಕ ಅನಿವಾಸಿ ಭಾರತೀಯರು, ಈ ಕೆಲಸವನ್ನು ಹೀಗೆಯೇ ಮುಂದುವರೆಸುವಂತೆ ಬೆಂಬಲ ಸೂಚಿಸಿದ್ದು, ಅಭಿಯಾನಕ್ಕೆ ಬೇಕಾಗುವ ಆರ್ಥಿಕ ಸಹಾಯ ನೀಡಲು ನಿರ್ಧರಿಸಿದ್ದಾರೆ.

ಇವರ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿರುವುದರಿಂದ ಮತ್ತಷ್ಟು ಉತ್ಸಾಹದಿಂದ ಯುವಕರು ಕೆಲಸ ಮಾಡಲು ಮುಂದಾಗಿದ್ದು, ಈ ಕಿಟ್​ನಲ್ಲಿ ಅಡುಗೆ ಎಣ್ಣೆ, ಅಕ್ಕಿ, ತೊಗರಿ ಸೇರಿದಂತೆ ವಿವಿಧ ಅಡುಗೆ ಸಾಮಗ್ರಿಗಳನ್ನು ತುಂಬಿಸಿ ಬಡಜನರಿಗೆ ನೀಡುತ್ತಿದ್ದಾರೆ.

ಓದಿ: ಅಕ್ಷಯ ತೃತೀಯ ಚಿನ್ನ ಖರೀದಿಗೆ ತಟ್ಟಿದ ಲಾಕ್​ಡೌನ್ ಬಿಸಿ: ಸಂಕಷ್ಟದಲ್ಲಿ ಚಿನ್ನದ ವ್ಯಾಪಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.