ಹುಬ್ಬಳ್ಳಿ: ರಾಜ್ಯ ಸರ್ಕಾರ ಮೇ 4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರೋದು ಎಣ್ಣೆ ಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದೆ.
ಹೀಗಾಗಿ ನಗರದ ಕಾಟನ್ ಮಾರ್ಕೆಟ್ನಲ್ಲಿ ಸ್ವತಃ ತಾವೇ ಮುಂದೆ ನಿಂತು ಬಾರ್ಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಟನ್ ಮಾರ್ಕೆಟ್ನ ಎಂಎಸ್ಐಎಲ್ ಮುಂದೆ ನೂಕುನುಗ್ಗಲಾಗದಂತೆ ತಾವೇ ಕಟ್ಟಿಗೆಯಿಂದ ಬ್ಯಾರಿಕೇಡ್ ನಿಲ್ಲಿಸುತ್ತಿದ್ದಾರೆ. ಸಾಲಿನಲ್ಲಿ ನಿಂತುಕೊಳ್ಳಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಕ್ಸ್ಗಳನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ.
ನಾಳೆಯ ದಿನ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಮದ್ಯಪ್ರಿಯರು ಎಣ್ಣೆ ಖರೀದಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗ್ತಿದೆ. ನಾಳೆ ಬೆಳಗ್ಗೆ ಎಂಎಸ್ಐಎಲ್ ಮಳಿಗೆಗಳು ಪ್ರಾರಂಭವಾಗುತ್ತಿದಂತೆ ಪೂಜೆ ಸಲ್ಲಿಸುವ ಕಾರ್ಯಕ್ರಮವೂ ಇಟ್ಟುಕೊಂಡಿದ್ದಾರೆ. ಇಷ್ಟು ದಿನ ಎಣ್ಣೆ ಇಲ್ಲದೆ ಕಂಗೆಟ್ಟ ಮದ್ಯಪ್ರಿಯರು ನಾಳೆ ಹಬ್ಬದಂತೆ ಆಚರಿಸುವ ಮುನ್ಸೂಚನೆ ನೀಡಿದ್ದಾರೆ.