ಧಾರವಾಡ: ನವೆಂಬರ್ 2 ರಿಂದ 3 ರವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯ ಮಾರಾಟ ಹಾಗೂ ಸಾಗಣೆ ನಿಷೇಧಿ ಹೊರಡಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿ ಹಿಂಪಡೆದಿದ್ದಾರೆ.
![ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ ಪ್ರಕಟ](https://etvbharatimages.akamaized.net/etvbharat/prod-images/kn-dwd-6-arrack-bandh-order-vapas-av-ka10001_01112020170632_0111f_1604230592_589.jpg)
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ -2020 ರ ಮತಗಳ ಎಣಿಕ ಕಾರ್ಯವು ನವೆಂಬರ್ 2 ರ ಬದಲಿಗೆ ನವೆಂಬರ್ 10 ಕ್ಕೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ನವೆಂಬರ್ 2 ರಿಂದ 3 ರವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯ ಮಾರಾಟ ಹಾಗೂ ಸಾಗಣೆ ನಿಷೇಧಿಸಲಾಗಿತ್ತು. ಈ ಹಿಂದೆ ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ ಪ್ರಕಟಣೆ](https://etvbharatimages.akamaized.net/etvbharat/prod-images/kn-dwd-6-arrack-bandh-order-vapas-av-ka10001_01112020170632_0111f_1604230592_1099.jpg)