ETV Bharat / state

112 ಸಮಸ್ಯೆರೀಪಾ.. ಸಿಬ್ಬಂದಿ ಕೊರತೆ ಎದುರಿಸುತ್ತಿದೆ ಹು-ಧಾ ಪೊಲೀಸ್ ಕಮಿಷನರೇಟ್! - 112 ತುರ್ತು ಸ್ಪಂದನ ವ್ಯವಸ್ಥೆ

112ಗೆ ನಿಯಮಾವಳಿ ಪ್ರಕಾರ ಒಂದು ವಾಹನದಲ್ಲಿ ಎಎಸ್ಐ, ಹೆಡ್ ಕಾನ್‌ಸ್ಟೇಬಲ್‌ ಮತ್ತು ಚಾಲಕ(ಸಿಎಆರ್) ಇರಬೇಕು. ಅಪರಾಧ ಪ್ರಕರಣಗಳೇನಾದರೂ ನಡೆದರೆ ಅದನ್ನು ಎಎಸ್ಐ ಗ್ರೇಡ್‌ ಸಿಬ್ಬಂದಿಯೇ ವಿಚಾರಣೆ ನಡೆಸಿ, ನೋಂದಣಿ ಮಾಡಿಕೊಳ್ಳಬೇಕು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ರಾತ್ರಿ ಪಾಳಿಯಲ್ಲಿ ಎಎಸ್ಐ ಇಲ್ಲದೇ ಕರ್ತವ್ಯ ನಿರ್ವಹಿಸುವಂತಾಗಿದೆ..

less staff in Hubli Dharwad police department
ಪೊಲೀಸ್ ಸಿಬ್ಬಂದಿ ಕೊರತೆ
author img

By

Published : Jun 3, 2022, 12:57 PM IST

ಹುಬ್ಬಳ್ಳಿ (ಧಾರವಾಡ) : ತುರ್ತು ಸಂದರ್ಭ ಹಾಗೂ ಅಪರಾಧ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ ಜಾರಿಗೆ ತಂದ 112 ತುರ್ತು ಸ್ಪಂದನ ವ್ಯವಸ್ಥೆ (ಎಆರ್‌ಎಸ್‌ಎಸ್‌)ಗೆ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಕಮಿಷನರೇಟ್‌ನಲ್ಲಿರುವ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 112 ಸೇವೆ ಇದೆ. ದಿನದ 24 ಗಂಟೆಯೂ ಈ ತಂಡ ತನ್ನ ಠಾಣಾ ವ್ಯಾಪ್ತಿಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಮೂರು ಪಾಳಿಯಂತೆ ಕರ್ತವ್ಯ ನಿರ್ವಹಿಸುತ್ತದೆ.

ಕಂಟ್ರೋಲ್ ರೂಂನಿಂದ ಕರೆ ಬಂದ ತಕ್ಷಣ ಘಟನಾ ಸ್ಥಳಕ್ಕೆ ಐದರಿಂದ ಹತ್ತು ನಿಮಿಷದಲ್ಲಿ ಸಿಬ್ಬಂದಿ ಹಾಜರಾಗುತ್ತಾರೆ. ಸಣ್ಣ ಪ್ರಕರಣಗಳಾದರೆ ಅಲ್ಲಿಯೇ ಕಾನೂನು ಸಲಹೆ, ಸೂಚನೆ ನೀಡಿ ಪರಿಹಾರ ಒದಗಿಸುತ್ತಾರೆ. ಅಪರಾಧ ಪ್ರಕರಣ ದಾಖಲಿಸುವುದು ಅನಿವಾರ್ಯವಾದರೆ ಠಾಣೆಗೆ ಹಸ್ತಾಂತರಿಸುತ್ತಾರೆ.

ಹು-ಧಾ ಪೊಲೀಸ್‌ ಕಮಿಷನರೇಟ್‌ಗೆ ಸಿಬ್ಬಂದಿ ಕೊರತೆ!

ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾದ 112 ವಾಹನದಲ್ಲಿ ಬಹುತೇಕ ಇಬ್ಬರೇ ಸಿಬ್ಬಂದಿ ಇರುತ್ತಾರೆ. ಎಎಸ್ಐ ಮುಂದಾಳತ್ವದಲ್ಲಿ ಮುನ್ನಡೆಯಬೇಕಾದ ಈ ತಂಡವನ್ನು ಹೆಡ್ ಕಾನ್‌ಸ್ಟೇಬಲ್ ಮುನ್ನಡೆಸುತ್ತಿದ್ದಾರೆ‌. ರಾತ್ರಿ ಪಾಳಿಯಲ್ಲಂತೂ ಎಎಸ್‌ಐ ಇರುವುದು ತೀರಾ ಅಪರೂಪ. ಸಿಬ್ಬಂದಿ ಕೊರತೆಯಿಂದಾಗಿ ಬೆಳಗಿನ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯೇ ರಾತ್ರಿ ಪಾಳಿಗೆ ಬರುತ್ತಾರೆ. ವಾರದ ರಜೆ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

112ಗೆ ನಿಯಮಾವಳಿ ಪ್ರಕಾರ ಒಂದು ವಾಹನದಲ್ಲಿ ಎಎಸ್ಐ, ಹೆಡ್ ಕಾನ್‌ಸ್ಟೇಬಲ್‌ ಮತ್ತು ಚಾಲಕ(ಸಿಎಆರ್) ಇರಬೇಕು. ಅಪರಾಧ ಪ್ರಕರಣಗಳೇನಾದರೂ ನಡೆದರೆ ಅದನ್ನು ಎಎಸ್ಐ ಗ್ರೇಡ್‌ ಸಿಬ್ಬಂದಿಯೇ ವಿಚಾರಣೆ ನಡೆಸಿ, ನೋಂದಣಿ ಮಾಡಿಕೊಳ್ಳಬೇಕು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ರಾತ್ರಿ ಪಾಳಿಯಲ್ಲಿ ಎಎಸ್ಐ ಇಲ್ಲದೇ ಕರ್ತವ್ಯ ನಿರ್ವಹಿಸುವಂತಾಗಿದೆ.

ಇದನ್ನೂ ಓದಿ: ಮಾದಪ್ಪನ ಬೆಟ್ಟದ ರಸ್ತೆ ಮಧ್ಯೆ ಬಂದು ನಿಂತ ಸಲಗ ; ವಾಹನ ಸಂಚಾರ ಅಸ್ತವ್ಯಸ್ತ

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮೂರು ಪಾಳಿ(ಎ, ಬಿ, ಸಿ)ಗಳಲ್ಲಿ ಮೂವರು ಸಿಬ್ಬಂದಿಯಂತೆ ಒಂಬತ್ತು ಮಂದಿ ಕರ್ತವ್ಯ ನಿರ್ವಹಿಸುತ್ತಾರೆ. ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನಲ್ಲಿ ಮಾತ್ರ ಸಿಬ್ಬಂದಿ ಒಂದೇ ದಿನ ಎರಡು ಪಾಳಿಯ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕಮಿಷನರ್ ಲಾಬೂರಾಮ್ ಅವರು ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಪ್ತಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಸರ್ಕಾರ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ವಿಶ್ವಾಸ ನೀಡಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.