ETV Bharat / state

ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ವಿಳಂಬ: ಹೊರಟ್ಟಿ ಅಸಮಾಧಾನ

author img

By

Published : Sep 29, 2021, 2:06 PM IST

Updated : Sep 29, 2021, 2:20 PM IST

ಈ ಹಿಂದೆಯೇ ಶಿಕ್ಷಕರ ವರ್ಗಾವಣೆಯನ್ನು ಸುಗ್ರೀವಾಜ್ಞೆ ಮೂಲಕ ಮಾಡಬೇಕಿತ್ತು. ಆದರೆ ಇಲಾಖೆಯ ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮೂರು ತಿಂಗಳ ವಿಳಂಬವಾಗಿದೆ. ಇದೀಗ ಈ ವಿಷಯ ಕೋರ್ಟ್​​​​ನಲ್ಲಿದ್ದು ಅಕ್ಟೋಬರ್ 4 ರಂದು ವಿಚಾರಣೆ ಇದ್ದು, ಆ ಬಳಿಕೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಹೊರಟ್ಟಿ ಹೇಳಿದರು.

ಹೊರಟ್ಟಿ ಅಸಮಾಧಾನ
ಹೊರಟ್ಟಿ ಅಸಮಾಧಾನ

ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದ್ದು, ಅಕ್ಟೋಬರ್ 4 ರ ನಂತರ ಮತ್ತೆ ವರ್ಗಾವಣೆ ಪ್ರಾರಂಭಗೊಳುವುದು ಎಂದು ವಿಧಾನ ಪರಿಷತ್​​ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಹೊರಟ್ಟಿ ಅಸಮಾಧಾನ

ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಯಾವುದೂ ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಪರಿಣಾಮ ಮೂರ್ಖ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆಯೇ ಶಿಕ್ಷಕರ ವರ್ಗಾವಣೆಯನ್ನು ಸುಗ್ರೀವಾಜ್ಞೆ ಮೂಲಕ ಮಾಡಬೇಕಿತ್ತು. ಆದರೆ, ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮೂರು ತಿಂಗಳ ವಿಳಂಬವಾಗಿದೆ. ಇದೀಗ ಈ ವಿಷಯ ಕೋರ್ಟ್ ನಲ್ಲಿದ್ದು ಅಕ್ಟೋಬರ್ 4 ರಂದು ವಿಚಾರಣೆ ಇದ್ದು, ಆ ಬಳಿಕೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದರು.

ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಅದರಂತೆ ಸರ್ಕಾರ 176 ಜನರ ಪಟ್ಟಿ ಮಾಡಿದ್ದು, ಅವರಿಗೆಲ್ಲ ಪರಿಹಾರ ದೊರೆಯಲಿದೆ ಎಂದರು. ಇನ್ನು, 1 ರಿಂದ 5ರವರಗೆ ಪ್ರಾಥಮಿಕ ಶಾಲೆ ಪ್ರಾರಂಭದ ಕುರಿತು ಮಾತನಾಡಿದ ಅವರು, ಒಂದರಿಂದ ಅಲ್ಲಾ ಸದ್ಯ 3,4,5 ನೇ ತರಗತಿ ಪ್ರಾರಂಭ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಪ್ಪಿಸಬೇಕು, ಈ ಬಗ್ಗೆ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇನೆ ಎಂದರು.

ಈ ಬಾರಿ ವಿಧಾನಸಭೆ ಅಧಿವೇಶನ ಉತ್ತಮ ರೀತಿಯಲ್ಲಿ ನಡೆದಿದ್ದು, ಸುದೀರ್ಘ ಚರ್ಚೆ ನಡೆಸಿ ವಿಧೇಯಕಗಳು ಪಾಸಾಗಿವೆ ಎಂದರು. ನಾನು ಸರ್ಕಾರಿ ಬಂಗಲೆಯನ್ನು ಕೇಳಿದ್ದೆ, ಸರ್ಕಾರ ಕೊಟ್ಟಿದೆ. ಅಕ್ಟೋಬರ್ 1 ರಂದು ಮನೆಗೆ ತೆರಳುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Last Updated : Sep 29, 2021, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.