ETV Bharat / state

ಅಂಗಡಿ ಸಹಾಯಕನಿಂದಲೇ ಮಾಲೀಕನಿಗೆ ಲಕ್ಷ - ಲಕ್ಷ ವಂಚನೆ: ದೂರು ದಾಖಲು - Hubli APMC Market

ನಗರದ ಅಮರಗೋಳದಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಎಂ. ಹೆಚ್‌. ಟ್ರೇಡರ್ಸ್‌ ಅಕ್ಕಿ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಸಹಾಯಕನೊಬ್ಬ ಮಾಲೀಕನಿಗೆ 5.6 ಲಕ್ಷ ವಂಚಿಸಿದ ಘಟನೆ ನಡೆದಿದೆ.

Lakhs of rupees fraud from shop assistant to owner
ಅಂಗಡಿ ಸಹಾಯಕನಿಂದಲೇ ಮಾಲೀಕನಿಗೆ ಲಕ್ಷ-ಲಕ್ಷ ವಂಚನೆ
author img

By

Published : May 8, 2020, 3:32 PM IST

ಹುಬ್ಬಳ್ಳಿ(ಧಾರವಾಡ): ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಸಹಾಯಕನೊಬ್ಬ ಮಾಲೀಕನಿಗೆ 5.6 ಲಕ್ಷ ವಂಚಿಸಿದ ಘಟನೆ ನಗರದ ಅಮರಗೋಳದಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಎಂ. ಹೆಚ್‌. ಟ್ರೇಡರ್ಸ್‌ ಅಕ್ಕಿ ವ್ಯಾಪಾರದ ಅಂಗಡಿಯಲ್ಲಿ ನಡೆದಿದೆ.

ಹೆಚ್‌. ಎಸ್. ಜಲಾಲಿ ಎಂಬಾತ ಎಂ. ಹೆಚ್‌. ಟ್ರೇಡರ್ಸ್‌ನಲ್ಲಿ ಏಳು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕನಿಗೆ ಕಾಲು ಮುರಿದಿದ್ದ ಕಾರಣ ಅಂಗಡಿಯ ನಿರ್ವಹಣೆ ನೋಡಿಕೊಂಡು ಹೋಗುವಂತೆ ಜಲಾಲಿಗೆ ಹೇಳಿದ್ದಾಗಿ ಮಾಲೀಕ ದೂರಿನಲ್ಲಿ ಹೇಳಿದ್ದಾರೆ.

ಐದು ತಿಂಗಳ ಬಳಿಕ ಮಾಲೀಕ ಅಂಗಡಿಗೆ ಹೋಗಿ ನೋಡಿದಾಗ 2.4 ಲಕ್ಷ ಮೊತ್ತದ 120 ಬಾಸುಮತಿ ಅಕ್ಕಿ ಚೀಲಗಳನ್ನು ಜಲಾಲಿ ಮಾರಿಕೊಂಡು ಹಣ ವಂಚಿಸಿದ್ದು, ಜೊತೆಗೆ ವಿವಿಧ ಹೋಟೆಲ್‌ಗಳಿಂದ ಅಂಗಡಿಯ ಮಾಲೀಕನಿಗೆ ಬರಬೇಕಿದ್ದ 1.7 ಲಕ್ಷವನ್ನೂ ಸಂಗ್ರಹಿಸಿ ಜಲಾಲಿ ಸ್ವಂತಕ್ಕೆ ಖರ್ಚು ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ, ಜಲಾಲಿ ಮಾಡಿದ್ದ 1.5 ಲಕ್ಷ ಸಾಲವನ್ನೂ ಅಂಗಡಿಯ ಮಾಲೀಕ ತೀರಿಸಿದ್ದಾಗಿ ತಿಳಿಸಿದ್ದಾರೆ

ಈ ಸಂಬಂಧ ಅಂಗಡಿ ಮಾಲೀಕ, ತಾನು ಕೊಟ್ಟ ಸಲುಗೆಯನ್ನು ಮತ್ತು ವ್ಯವಹಾರವನ್ನು ದುರುಪಯೋಗಪಡಿಸಿಕೊಂಡು ಜಲಾಲಿ ಮೋಸ ಮಾಡಿದ್ದಾನೆ.

ಈ ಎಲ್ಲ ಹಣವನ್ನು ವಾಪಸ್‌ ಕೊಡುವಂತೆ ಕೇಳಿದಾಗ ಪೊಲೀಸರಿಗೆ ದೂರು ನೀಡದೆ ಒಪ್ಪಂದ ಮಾಡಿಕೊಳ್ಳುವಂತೆ ಜಲಾಲಿಯ ಸ್ನೇಹಿತರಾದ ಸೈಯದ್‌, ವಾಜಿದ್‌, ಎಜಾಜ್‌ ಮತ್ತು ಫರಾನ್‌ ಅವರು ಅಂಗಡಿಯ ಮಾಲೀಕನಿಗೆ ಒತ್ತಡ ಹಾಕಿದ್ದಲ್ಲದೇ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ನವನಗರ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.