ETV Bharat / state

ಟಾಟಾ ಏಸ್​ ವಾಹನವನ್ನೇ ಮನೆ ಮಾಡಿಕೊಂಡು ಬಾಣಂತಿ, ಹಸುಗೂಸು ಆರೈಕೆ - ಬಾಣಂತಿ

ಲಾಕ್​​ಡೌನ್​​ ಪರಿಣಾಮ ಟಾಟಾ ಏಸ್​ ವಾಹನದಲ್ಲೇ ಬಾಣಂತಿ ಹಾಗೂ ಹಸುಗೂಸು ಆರೈಕೆ ಮಾಡಿಸಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.

lactating women and her baby living in vehicle due to lockdown
ವಾಹನದಲ್ಲೇ ಬಾಣಂತಿಯ ಆರೈಕೆ
author img

By

Published : May 1, 2020, 12:05 PM IST

ಧಾರವಾಡ: ಕೊರೊನಾ ಲಾಕ್‌ಡೌನ್ ಮಾಡಿರುವುದರಿಂದ ಜಿಲ್ಲೆಯಲ್ಲಿ ತನ್ನ 2 ವಾರದ ಹಸುಗೂಸಿನೊಂದಿಗೆ ಬಾಣಂತಿ ಟಾಟಾ ಏಸ್ ವಾಹನದಲ್ಲಿ ದಿನ ದೂಡುವ ಪರಿಸ್ಥಿತಿ ಎದುರಾಗಿದೆ.

ವಾಹನದಲ್ಲೇ ಬಾಣಂತಿಯ ಆರೈಕೆ

ಜಿಲ್ಲೆಯ ಬಣದೂರ ಗ್ರಾಮದ ಹೊರವಲಯದಲ್ಲಿ ಗೂಡ್ಸ್ ವಾಹನವನ್ನೇ ಮನೆ ಮಾಡಿಕೊಂಡು ಅದರಲ್ಲಿ ‌ತನ್ನ ಹಸುಗೂಸು ಪಾಲನೆ ಮಾಡುತ್ತಿರುವ ಮನಕಲುಕುವ ದೃಶ್ಯ ಕಂಡು‌ ಬಂದಿದೆ.

ಲಾಕ್​​ಡೌನ್​​ಗೂ ಮುಂಚೆ ಧಾರವಾಡ ಹಾಗೂ ಹಾವೇರಿ ಭಾಗದ ಹೆಳವರು ಧಾರವಾಡ ಜಿಲ್ಲೆಯ ಹಳಿಯಾರ ರಸ್ತೆಯ ಹಳ್ಳಿಗಳಲ್ಲಿ ಸಂಚಾರ ಮಾಡುತ್ತ ಬಣದೂರ ಗ್ರಾಮದ ಹೊರ ವಲಯದಲ್ಲಿ ಕ್ಯಾಂಪ್‌ ಹಾಕಿಕೊಂಡಿದ್ದರು. ಇನ್ನೇನು ತಮ್ಮ‌ ಊರುಗಳನ್ನು ಸೇರಬೇಕು ಎನ್ನುವಾಗ ‌ ಕೊರೊನಾ ಲಾಕ್​ಡೌನ್​​​ ಜಾರಿಯಾಗಿ ಇವರೆಲ್ಲ ಬಣದೂರ ಬಯಲಿನಲ್ಲಿ ಲಾಕ್ ಆಗಿ ಬಿಟ್ರು.‌ ಇದೇ ವೇಳೆ ಕ್ಯಾಂಪ್​​ನಲ್ಲಿದ್ದ ಬಸವ್ವ ಎಂಬುವವರ ಮಗಳು ಸರಸ್ವತಿ ತುಂಬು ಗರ್ಭಿಯಾದ್ದರಿಂದ ಕಳೆದ 2 ವಾರಗಳ ಹಿಂದೆ ಆಸ್ಪತ್ರೆಯಲ್ಲಿ ಹೆರಿಗೆ ಕೂಡ ಆಗಿದೆ.
ಹೀಗಾಗಿ ಟಾಟಾ ಏಸ್​​ ಹಿಂಭಾಗಕ್ಕೆ ಕೌದಿಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಅದರಲ್ಲೇ ಬಾಣಂತಿ ಹಾಗೂ ಮಗುವಿನ ಆರೈಕೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.