ETV Bharat / state

ಕೋವಿಡ್ ಭೀತಿ: ಕ್ಯಾರಕೋಪ್ಪ ಗ್ರಾಮ ಬಂದ್ ಮಾಡಿದ ಗ್ರಾಮಸ್ಥರು - ಧಾರವಾಡ ಕ್ಯಾರಕೋಪ್ಪ ಗ್ರಾಮ ಬಂದ್

ರಸ್ತೆಗಳನ್ನು ಬಂದ್ ಮಾಡುವ ಮೂಲಕ ಧಾರವಾಡದ ಗ್ರಾಮವೊಂದರ ಜನರು ಸೋಂಕು ಹರಡದಂತೆ ಮುನ್ನೆಚರಿಕೆ ವಹಿಸಿದ್ದಾರೆ.

Kyarakopa Villagers Closed roads
ಕ್ಯಾರಕೋಪ್ಪ ಗ್ರಾಮದ ರಸ್ತೆಗಳು ಬಂದ್
author img

By

Published : May 23, 2021, 10:07 AM IST

ಧಾರವಾಡ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕಿನ ಕ್ಯಾರಕೋಪ್ಪ ಗ್ರಾಮದ ಸಂಪರ್ಕ ಬಂದ್ ಮಾಡಲಾಗಿದೆ.

ಸ್ವತಃ ಗ್ರಾಮಸ್ಥರೇ ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಗ್ರಾಮದ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ನಗರದಿಂದ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ತಮಗೆ ತಾವೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಗ್ರಾಮಸ್ಥರು, ಹೊರಗಿನವರು ಗ್ರಾಮ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಇದೇ ರೀತಿ ಗ್ರಾಮಸ್ಥರೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. '

ಓದಿ : ಕಿಮ್ಸ್​ನಲ್ಲಿ ವಿವಿಧ ಜಿಲ್ಲೆಯ 78 ಬ್ಲಾಕ್​ ಫಂಗಸ್​​​ ರೋಗಿಗಳಿಗೆ ಚಿಕಿತ್ಸೆ: ಡಿಸಿ ಮಾಹಿತಿ

ಧಾರವಾಡ ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 973 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 49,529 ಆಗಿದೆ. ಶನಿವಾರ 723 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 41,703 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 9 ಮಂದಿ ಮೃತಪಟ್ಟಿದ್ದು, ಇದುವರೆಗೆ 844 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ, 6981 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.