ಹುಬ್ಬಳ್ಳಿ: ಕುಂದಗೋಳ ಬಿಜೆಪಿ ಟಿಕೆಟ್ಗಾಗಿ ಎಸ್. ಐ. ಚಿಕ್ಕನಗೌಡ ಹಾಗೂ ಎಂ. ಆರ್ . ಪಾಟೀಲ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್ ಚಿಕ್ಕನಗೌಡರತ್ತ ಒಲವು ತೋರಿದ್ದು, ಎಂ. ಆರ್. ಪಾಟೀಲ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ಚಿಕ್ಕನಗೌಡ ಅವರು, ಬಿ ಎಸ್ ಯಡಿಯೂರಪ್ಪ ಅವರ ಸಂಬಂಧಿ ಎಂಬ ಕಾರಣಕ್ಲೆ ಟಿಕೆಟ್ ನೀಡಲಾಗುತ್ತಿದೆ. ತಮ್ಮ ಸಂಬಂಧಿ ಎಸ್ ಐ ಚಿಕ್ಕನಗೌಡರ್ ಅವರಿಗೆ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕಾರಣ ಮಾಡಿದ್ದಿರಿ ಎಂದು ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿಗಾಗಿ ದುಡಿದವರನ್ನು ಕಡೆಗಣಿಸಿದ್ದೀರಿ. ಇದು ಯಾವ ನ್ಯಾಯ, ನಾವು ಕಷ್ಟಪಟ್ಟಿಲ್ವಾ, ಪಾಟೀಲ್ ಅವರು 22 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಆದ್ರೆ ನೀವು ನಿಮ್ಮ ಸಂಬಂಧಿ ಎಂಬ ಕಾರಣಕ್ಕೆ ಚಿಕ್ಕನಗೌಡ ಅವರಿಗೆ ಟಿಕೆಟ್ ನೀಡಿದ್ದೀರಿ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನಿಮಗೆ ಚಿಕ್ಕನಗೌಡ ಅವರು ಕಾಣಿಸಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಕ್ಷೇತ್ರದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.