ETV Bharat / state

ಹುಬ್ಬಳ್ಳಿಯಲ್ಲಿ ಸೋಮವಾರದಿಂದ ಬಸ್ ಸಂಚಾರ ಆರಂಭಕ್ಕೆ ಸಿದ್ಧತೆ - Hubli

ಇದೇ ಭಾನುವಾರ ಲಾಕ್​ಡೌನ ಮುಗಿಯಲಿದೆ. 17ರ ನಂತರ ಅಂದರೆ ಸೋಮವಾರದಿಂದ ಲಾಕ್​ಡೌನ್​ನ ಹೊಸ ನಿಯಮಗಳೊಂದಿಗೆ ಬಸ್ ಸಂಚಾರ ಆರಂಭವಾಗಲಿದೆ.

KSRTC bus start their service on Monday
ಬಸ್ ಸಂಚಾರ
author img

By

Published : May 16, 2020, 9:35 AM IST

ಹುಬ್ಬಳ್ಳಿ: ಮಾರ್ಚ್ 21ರಿಂದ ಲಾಕ್​ಡೌನ್ ಘೋಷಣೆಯಾದ ಹಿನ್ನೆಲೆ ನಗರ ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಇದೀಗ ಕೊರೊನಾ ಭೀತಿ ಸ್ವಲ್ಪ ಕಡಿಮೆಯಾಗಿರುವುದರಿಂದ ಮೇ 17ರ ನಂತರ ವಾಯುವ್ಯ ಕರ್ನಾಟಕ ಸಾರಿಗೆ ಸಂಚಾರ ಆರಂಭಿಸಲು ಸಜ್ಜಾಗುತ್ತಿದೆ.

ಹೌದು, ನಗರದಲ್ಲಿ 30 ಬಸ್ಸುಗಳು ಸಂಚರಿಸಲಿವೆ. ಹುಬ್ಬಳ್ಳಿ-ಧಾರವಾಡದ ನಡುವೆ 30 ಬಸ್​​ಗಳು ಓಡಾಟ ಆರಂಭಿಸಲು ಸಜ್ಜಾಗಿವೆ. ಹಾಗಯೇ 25 ಬಸ್​​ಗಳನ್ನು ನಗರದಿಂದ ಗ್ರಾಮೀಣ ಭಾಗಕ್ಕೆ ಸಂಚಾರ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಗದಿತ ಪ್ರದೇಶಗಳಿಗೆ ಮಾತ್ರ ಬಸ್​​ಗಳನ್ನು ಓಡಿಸಲು ವಾಯುವ್ಯ ಸಾರಿಗೆ ಇಲಾಖೆ ಸಜ್ಜಾಗಿದೆ. ನಗರದ ಗೋಕುಲ ರಸ್ತೆಯಲ್ಲಿರುವ ಹೊಸ್ ಬಸ್ ನಿಲ್ದಾಣದಲ್ಲಿ ಎಲ್ಲ ಬಸ್​ಗಳನ್ನು ಸ್ಯಾನಿಟೈಸ್​ ಮಾಡಲಾಗುತ್ತಿದೆ.

ಇದೇ ಭಾನುವಾರ ಲಾಕ್​ಡೌನ ಮುಗಿಯಲಿದೆ. 17ರ ನಂತರ ಅಂದರೆ ಸೋಮವಾರದಿಂದ ಲಾಕ್​ಡೌನ್​ನ ಹೊಸ ನಿಯಮಗಳೊಂದಿಗೆ ಬಸ್ ಸಂಚಾರ ಆರಂಭವಾಗಲಿದೆ. ಹುಬ್ಬಳ್ಳಿ ವಿಭಾಗದಿಂದ ಒಟ್ಟು 85 ಬಸ್​​ಗಳ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ಸಜ್ಜಾಗಿದ್ದು, ಜಿಲ್ಲಾಡಳಿತದ ಹೊಸ ಮಾರ್ಗಸೂಚಿಯಂತೆ ಸಂಚಾರ ಆರಂಭಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.