ಹುಬ್ಬಳ್ಳಿ: ನಗರದಲ್ಲಿ ಗಣೇಶ ನಿಮಜ್ಜನ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಈ ವೇಳೆ ಚಾಕು ಇರಿತದಿಂದ ಆರು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ನಗರದ ದುರ್ಗದ ಬೈಲ್ನಲ್ಲಿ ಇಬ್ಬರಿಗೆ, ಹರ್ಷ ಕಾಂಪ್ಲೆಕ್ಸ್ನಲ್ಲಿ ಓರ್ವ, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಓರ್ವ ಹಾಗೂ ಹಳೇ ಹುಬ್ಬಳ್ಳಿಯಲ್ಲಿ ಇಬ್ಬರು ಸೇರಿದಂತೆ ಒಟ್ಟು ಆರು ಜನರಿಗೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ. ಘಟನೆಯಲ್ಲಿ ಬಸವರಾಜ ವೀರೇಶ್ ಶಿವುರ, ಮಹಾಂತೇಶ ಬಸವನಗೌಡ ಹೊಸಮನಿ (17), ವಿನಾಯಕ ಭಜಂತ್ರಿ (21), ಮಂಜುನಾಥ ರಾಜು ಗೋಕಾಕ್ (25), ನಾಗರಾಜ ಕುಂಬಾರ (33), ಪ್ರಕಾಶ್ ಕಠಾರೆ (32) ಎಂಬುವರಿಗೆ ಗಾಯಗಳಾಗಿವೆ.
ಬಸವರಾಜ ಹಾಗೂ ಮಹಾಂತೇಶ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ ಎನ್ನಲಾಗಿದ್ದು, ಈ ಕುರಿತು ಉಪನಗರ ಹಾಗೂ ಶಹರ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.