ಧಾರವಾಡ: ಗಣೇಶ ಮೆರವಣಿಗೆ ಸಂದರ್ಭದಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿ ನಂತರ ಸ್ಥಳದಿಂದ ಕಾಲ್ಕಿತ್ತ ಘಟನೆ ಕೆಲಗೇರಿ ಆಂಜನೇಯ ನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಜ್ವಲ್ ಎಂಬುವವರ ಕಣ್ಣು ಹುಬ್ಬಿನ ಮೇಲೆ ಇರಿದು ಗಾಯಗೊಳಿಸಲಾಗಿದೆ.

ಗಂಭೀರ ಗಾಯಗೊಂಡಿರುವ ಪ್ರಜ್ವಲ್ನನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಕೆಲಗೇರಿ ಆಂಜನೇಯ ನಗರದಲ್ಲಿ 11ನೇ ದಿನದ ಗಣೇಶ ನಿಮಜ್ಜನಾ ಮೆರವಣಿಗೆಯಲ್ಲಿ ಘಟನೆ ನಡೆಯಿತು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಯುವತಿ ಮೇಲೆ ಅತ್ಯಾಚಾರ ಯತ್ನಿಸಿ ವಿಫಲಗೊಂಡಾಗ ಬೆಂಕಿ ಹಚ್ಚಿ ಪರಾರಿ...ವಿಡಿಯೋ ವೈರಲ್