ಧಾರವಾಡ: ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಕನ್ನಡದ ವಿದ್ಯಾರ್ಥಿಗಳು ಹಂಗೇರಿ ದೇಶ ತಲುಪಿದ್ದಾರೆ. ಹಂಗೇರಿಯ ಆಶ್ರಯ ತಾಣಕ್ಕೆ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್
ಈ ಕುರಿತು ಉಕ್ರೇನ್ನಲ್ಲಿರುವ ಕನ್ನಡಿಗ ಸ್ವಯಂ ಸೇವಕ ಮಂಜುನಾಥ ಹೊಸಮನಿ ಎಂಬುವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಹಂಗೇರಿಯ ಬುಡಾಪೆಸ್ಟ್ ಆಶ್ರಯ ತಾಣದಲ್ಲಿ ಮಂಜುನಾಥ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.