ETV Bharat / state

ಮಕ್ಕಳಲ್ಲಿಯೂ ಕಾಂತಾರ ಕ್ರೇಜ್​​: ಪಂಜುರ್ಲಿ ವೇಷದಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

author img

By

Published : Oct 28, 2022, 1:07 PM IST

ಎಲ್ಲೆಡೆ ಕಾಂತಾರ ಸಿನಿಮಾ ಮೈಲಿಗಲ್ಲುಗಳನ್ನು ಗುರುತು ಮಾಡಿಕೊಂಡು 25 ದಿನ ಪೂರೈಸಿ ಸಾಗುತ್ತಿದೆ. ಈ ನಡುವೆ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಕಾಂತಾರದ ವೇಷ ಭೂಷಣ ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಯೊಬ್ಬಳು ಗಮನ ಸೆಳೆದಿದ್ದಾಳೆ.

kantara-movie-panjurli-fancy-dress-competition
ಮಕ್ಕಳಲ್ಲಿಯೂ ಕಾಂತಾರ ಕ್ರೇಜ್​

ಹುಬ್ಬಳ್ಳಿ : ಕನ್ನಡ ಸಿನಿಮಾ ರಂಗದಲ್ಲಿಯೇ ಕಾಂತಾರ ಸಿನಿಮಾ ಸಾಕಷ್ಟು ಸದ್ದನ್ನು ಮಾಡಿದೆ. ಕಾಂತಾರ ಸಿನಿಮಾ ಸಿನಿ ರಸಿಕರಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಮಾತ್ರವಲ್ಲದೇ ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿಯೂ ವೇಷಭೂಷಣದ ಕ್ರೇಜ್ ಹೆಚ್ಚಿಸಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ರೈಲ್ವೆ ಉದ್ಯೋಗಿ ನವೀನ್ ನವಲಗುಂದ ಅವರ ಮಗಳು ನಿಸರ್ಗ ನವೀನ್ ನವಲಗುಂದ ಅವರು ಕಾಂತಾರ ಸಿನಿಮಾದಲ್ಲಿ ಮೂಡಿ ಬಂದಿರುವ ಪಂಜುರ್ಲಿ ದೈವದ ವೇಷಭೂಷಣ ತೊಟ್ಟು ಮಿಂಚಿದ್ದಾರೆ.

ಇನ್ನೂ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ಸಾಕಷ್ಟು ಕೊಡುಗೆ ನೀಡಿರುವ ಯಕ್ಷಗಾನ ಹಾಗೂ ಬಯಲಾಟಗಳು ಈಗ ಮತ್ತಷ್ಟು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಮರೆಯಾಗುತ್ತಿರುವ ಸಂಪ್ರದಾಯಿಕ ಆಚರಣೆಗಳನ್ನು ಮನೆ ಹಾಗೂ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿರುವ ರಿಷಭ್ ಶೆಟ್ಟಿ ಪ್ರಯತ್ನಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಉಡುಪಿ: ರಂಗೋಲಿಯಲ್ಲಿ ಮೂಡಿದ ಕಾಂತಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.