ಧಾರವಾಡ: ಜಿಲ್ಲೆಯಾದ್ಯಂತ ಕೊರೊನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ಕೆಲ ಸಡಿಲಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜೂನ್ 01 ರಿಂದ 06 ರವರೆಗೆ ಹೊಟೇಲ್ ಹಾಗೂ ಮದ್ಯದ ಅಂಗಡಿ ತೆರೆಯಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಓದಿ: ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ.. ಅರ್ಧಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಸಚಿವ
ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಂಡ ಪರಿಣಾಮ ಹೊಟೇಲ್ ಹಾಗೂ ಮದ್ಯದ ಅಂಗಡಿ ಬಂದ್ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಪಾರ್ಸಲ್ಗೆ ಅವಕಾಶ ನೀಡಲಾಗಿದೆ. ಜೂ. 01 ಬೆಳಗ್ಗೆ 06 ಗಂಟೆಯಿಂದ 08 ಗಂಟೆ ವರೆಗೆ ಪಾರ್ಸಲ್ ನೀಡಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಪಾರ್ಸಲ್ ನೀಡಲು ಅನುಮತಿ ಕೊಟ್ಟಿದ್ದು, ಜಿಲ್ಲೆಯಲ್ಲಿ ನಿರಾಶ್ರಿತರು ಹಾಗೂ ಹೋಮ್ ಐಸೋಲೇಶನ್ ಇರುವ ಜನರಿಗೆ ಊಟದ ತೊಂದರೆ ಹಾಗೂ ಬೇರೆ ಜಿಲ್ಲೆಯಿಂದ ಬಂದ ಜನರ ಅನುಕೂಲಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜೂನ್ 01 ರಿಂದ ಮತ್ತೆ ಮದ್ಯದಂಗಡಿಗಳಲ್ಲಿ ಪಾರ್ಸಲ್ ಸಿಗಲಿದೆ.