ETV Bharat / state

2ಎ ಮೀಸಲಾತಿ ವಿಚಾರ: ಸಿಎಂ ನಡೆಗೆ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ - ​ ETV Bharat Karnataka

ಸಿಎಂ ಸಿದ್ದರಾಮಯ್ಯ ನಡೆಗೆ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿ ಡಿ.13 ರಂದು ಬೆಳಗಾವಿಯಲ್ಲಿ ಹೋರಾಟ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ

author img

By ETV Bharat Karnataka Team

Published : Dec 11, 2023, 9:52 PM IST

ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

ಧಾರವಾಡ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರ ಸಿಎಂ ಸಿದ್ದರಾಮಯ್ಯ ನಡೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೊಂದು ಸುತ್ತಿನ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪಂಚಮಸಾಲಿಗೆ 2ಎ ಮೀಸಲಾತಿ, ಲಿಂಗಾಯತರಿಗೆ ಒಬಿಸಿ ಮೀಸಲಾತಿಗಾಗಿ ಹೋರಾಟ ನಡೆದಿದೆ. ಈ ಸಂಬಂಧ ಸಭೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ಕೇಳಿಕೊಳ್ಳಲಾಗಿದೆ. ಬೆಳಗಾವಿದಲ್ಲಿಯೇ ಸಭೆ ಮಾಡಿ ಎದ್ದು ಕೇಳಿದ್ದೆವು. ಆದರೆ, ಸಿಎಂ ನಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ಹೀಗಾಗಿ ಡಿ. 13ರಂದು ಬೆಳಗಾವಿದಲ್ಲಿ ಬೃಹತ್​ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

2ಎ ಮೀಸಲಾತಿ ರಾಜ್ಯ ಸರ್ಕಾರದ ಕೈಯಲ್ಲಿದೆ. ಒಬಿಸಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಮೀಸಲಾತಿ ಘೋಷಿಸಬೇಕು. ಆದರೆ ಎರಡೂ ಕಡೆ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿವೆ. ಈಗ ಲೋಕಸಭೆ ಚುನಾವಣೆ ಬಂದಿದೆ. ಈ ಸಮಯದಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದೇ ಹೋದಲ್ಲಿ ಎರಡೂ ಪಕ್ಷಗಳಿಗೆ ಸಮಾಜದ ಜನರು ಪಾಠ ಕಲಿಸುತ್ತಾರೆ. ಎರಡೂ ರಾಜಕೀಯ ಪಕ್ಷಗಳು ಲೋಕಸಭೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಬೇಡಿಕೆ ಈಡೇರಿಸಲಿದ್ದಲ್ಲಿ ಎರಡು ಪಕ್ಷಗಳ ಮೇಲೆ‌ ಪರಿಣಾಮ ಬೀರುತ್ತದೆ ಎಂದು ಶ್ರೀಗಳು ತಿಳಿಸಿದರು.

ಅಲ್ಲದೇ ತಮ್ಮದೇ ಸಮಾಜದ ಮುಖಂಡರ ವಿರುದ್ಧ ಪಂಚಮಸಾಲಿ ಜಗದ್ಗುರು ಅಸಮಾಧಾನ ವ್ಯಕ್ತಪಡಿಸಿದ್ದು, ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ವಿಚಾರ ಆರಂಭದಲ್ಲಿ ನಮ್ಮ ಸಮಾಜದ ಮುಖಂಡರು, ಶಾಸಕರು ಹುರುಪಿನಿಂದ ಮಾತನಾಡಿದ್ದರು. ಆದರೆ, ಈಗ ಅವರು ಮೌನವಾಗಿದ್ದಾರೆ. ಜನರೇ ಈಗ ಅವರನ್ನು ಕೇಳುತ್ತಿದ್ದಾರೆ. ಮೊದಲಿನಂತೆ ಹುರುಪಿನಿಂದ ಮಾತನಾಡಿ ಎಂದು ಕೇಳುತ್ತಿದ್ದಾರೆ‌. ಈ ಸಂಬಂಧ ಶಾಸಕರುಗಳ ಸಭೆಯನ್ನೂ ಕರೆದು ಹೇಳಿದ್ದೇವೆ‌. ಹಿಂದೆ ಮಾಜಿ ಇದ್ದಾಗ ಹುರುಪು ಆವೇಶದಿಂದ ಮಾತನಾಡಿದ್ದೀರಿ, 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದಿದ್ದೀರಿ. ಈಗ ಅಧಿಕಾರಕ್ಕೆ ಬಂದ ಮೇಲೆ ಮೌನ ಯಾಕೆ ಅಂತಾ ಜನ ಕೇಳುತ್ತಿದ್ದಾರೆ. ಆಗ ನಾಯಕರು ಭಾವನಾತ್ಮಕವಾಗಿ ಮಾತನಾಡಿದ್ದರು. ಈಗ ಜನರೇ ಪ್ರಶ್ನೆ ಮಾಡುತ್ತಿದ್ದಾರೆ. ಅವರೂ ಈಗ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ಒಂಟಿ ಸಲಗದ ರೀತಿ ಹೋರಾಟ ಮಾಡಿದ್ದಾರೆ‌. ಈಗಿನ ಶಾಸಕರು ಅವರಂತೆ ಮಾಡಬೇಕಿದೆ. ಯತ್ನಾಳ ಅವರೇ ಶಾಸಕ ವಿನಯ ಕುಲಕರ್ಣಿಗೆ ಮಂತ್ರಿಯಾಗುವ ಕಸನು ಕಾಣಬೇಡ ಜವಾಬ್ದಾರಿ ತೆಗೆದುಕೊಂಡು ಸಮಾಜದ ಜೊತೆ ನೀ ಇರು. ಅಧಿಕಾರ ಇವತ್ತು ಬರುತ್ತೇ ಹೋಗುತ್ತದೆ‌. ಆದರೆ, ಸಮಾಜ ಶಾಶ್ವತ ಅಂತಾ ಬಹಿರಂಗವಾಗಿ ಹೇಳಿದ್ದಾರೆ. ಇದರ ಬೆನ್ನೆಲ್ಲೇ ವಿನಯ ಕುಲಕರ್ಣಿ ಅಧಿವೇಶನದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಕುಲಕರ್ಣಿ ಧ್ವನಿ ಎತ್ತಿದಾಗ ಉಳಿದವರು ಧ್ವನಿಗೂಡಿಸಬೇಕಿದೆ. ಧ್ಚನಿಗೂಡಿಸಿ ಎಂದು ಉಳಿದ ಶಾಸಕರಿಗೂ ಮಾತನಾಡಲು ಹೇಳಿದ್ದೇವೆ ಎಂದು ನುಡಿದರು.

ಇದನ್ನೂ ಓದಿ : ಡಿ.​ 13ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.