ETV Bharat / state

ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ.. - ಮುನಿಶ್ರೀ ವಿರುದ್ಧ ಹಣದ ಆರೋಪ ಸರಿಯಲ್ಲ

ಜೈನ ಸನ್ಯಾಸಿಗಳು ಕಾಲ್ನಡಿಗೆ ಯಾತ್ರೆ, ಸರ್ವಸಂಗ ಪರಿತ್ಯಾಗ ಮಾಡ್ತಾರೆ. ಅಂತ ಮಹಾನ್ ಮುನಿಗಳನ್ನು ಹೀಗೆ ಹತ್ಯೆ ಮಾಡಿದ್ದು ಹೇಯ ಕೃತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡನೆ

Union Minister Prahlad Joshi spoke to the media.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆಗೆ ಮಾತನಾಡಿದರು.
author img

By

Published : Jul 9, 2023, 9:58 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆಗೆ ಮಾತನಾಡಿದರು.

ಹುಬ್ಬಳ್ಳಿ: ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನೆಲೆಯಲ್ಲಿ‌ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವರೂರ ಕ್ಷೇತ್ರದ ಗುಣಧರ ನಂದಿ ಶ್ರೀಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಇತಿಹಾಸದಲ್ಲೇ ಕ್ರೂರ ಘಟನೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಖಂಡನೀಯ. ಅವರಿಗೆ ವಿದ್ಯುತ್ ಶಾಕ್ ಕೊಟ್ಟು, ಕೈಕಾಲು ಕತ್ತರಿಸಿ ಬೋರ್​ವೆಲ್​ನಲ್ಲಿ ಹಾಕಿದ್ದಾರೆ. ಇದು ಇತಿಹಾಸದಲ್ಲೇ ಕ್ರೂರ ಘಟನೆ. ಜೈನ ಸನ್ಯಾಸಿಗಳು ಕಾಲ್ನಡಿಗೆ ಯಾತ್ರೆ, ಸರ್ವಸಂಗ ಪರಿತ್ಯಾಗ ಮಾಡ್ತಾರೆ. ಅಂತವರನ್ನು ಹೀಗೆ ಹತ್ಯೆ ಮಾಡಿದ್ದು ಹೇಯ ಕೃತ್ಯ. ಕಾಣೆಯಾಗಿದ್ದಾರೆ ಅಂದಮೇಲೂ ಈ ಕೇಸ್​ನ್ನು ಪೊಲೀಸರು ಗಂಭೀರವಾಗಿ ತೆಗದುಕೊಂಡಿರಲಿಲ್ಲ. ಪ್ರತಿಭಟನೆ ಮಾಡ್ತೀನಿ ಅಂದಾಗ ಗಂಭೀರವಾಗಿ ತೆಗೆದುಕೊಂಡ್ರು ಎಂದು ಆರೋಪಿಸಿದರು.

ಮುನಿಶ್ರೀ ವಿರುದ್ಧ ಹಣದ ಆರೋಪ ಸರಿಯಲ್ಲ: ಶ್ರೀಗಳು ಆರೋಪಿಗಳಿಗೆ ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ರು ಅಂತ ಮಾಹಿತಿ ಇದೆ. ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತ ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ಶಾಸಕ ಅಭಯ್​ ಪಾಟೀಲ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ಆರೋಪಿಗಳ ಹೆಸರು ಬಿಡುಗಡೆ ಮಾಡಿದ್ರು. ಈ ಕೃತ್ಯವನ್ನು ಯಾರೇ ಮಾಡಿದ್ರು ಅಪರಾಧ. ಇದಕ್ಕೆ ಜಾತಿ ಇರಲ್ಲ. ಸರ್ಕಾರದ ನಿಲುವು ಸರಿಪಡಿಸಿಕೊಳ್ಳಬೇಕು. ಶ್ರೀಗಳ ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರ್ತೇನೆ. ರಾಜ್ಯ ಸರ್ಕಾರ ಸಹ ಗಮನಕ್ಕೆ ತೆಗೆದುಕೊಳ್ಳಬೇಕು. ನಾನು ಕೇಂದ್ರ ಸರ್ಕಾರದಿಂದ ಸಂಪೂರ್ಣ ಪ್ರಯತ್ನ ಮಾಡ್ತೇವೆ ಎಂದು ತಿಳಿಸಿದರು.

ವರೂರ ಕ್ಷೇತ್ರ ಶ್ರೀಗಳಿಗೆ ಆಮರಣ ಉಪವಾಸ ಬೇಡವೆಂದು ಮನವಿ: ಶ್ರೀಗಳ ಆಮರಣಾಂತ ಉಪವಾಸ ಬೇಡ ಅಂತ ನಾನು ಮನವಿ ಮಾಡಿದ್ದೇನೆ. ಮುಂದಿನ ದಿನಗಲ್ಲಿ ನ್ಯಾಯ ಸಿಗದೇ ಇದ್ದಲ್ಲಿ ಎಲ್ಲರೂ ಕೂಡಿ ಪ್ರತಿಭಟನೆ ಮಾಡೋಣ. ಕರ್ನಾಟಕ ಸರ್ಕಾರ ಅತ್ಯಂತ ಸಂವೇದನ ಮಾಡುತ್ತೆ ಅನ್ನೋದು ಇದೆ. ಜಾತಿ ಯಾಕೆ ನೋಡಬೇಕು. ಹೆಸರು ಬಿಡುಗಡೆ ಮಾಡೋಕೆ ತಯಾರಿಲ್ಲ ನೀವು. ಪ್ರತಿಭಟನೆ ಮಾಡ್ತೀವಿ ಅಂದಾಗ ಹೆಸರು ಬಿಡುಗಡೆ ಮಾಡಿದ್ರು ಎಂದು ಅಪಾದಿಸಿದರು.

ಮುನಿಗಳು ಸ್ವಾಮೀಜಿಗಳು ಈ ರೀತಿ ಮುನಿಸಿಕೊಂಡರೆ ಸರ್ಕಾರಕ್ಕೆ ಶಾಪ ಆಗುತ್ತೆ. ಪ್ರಕರಣವನ್ನು ಸಿಬಿಐಗೆ ಕೊಡಿ. ಸರ್ಕಾರದ ಸಪೋರ್ಟ್ ಇರುತ್ತೆ ಅಂದಾಗ ಈ ರೀತಿ ವರ್ತನೆ ನಡೆಯುತ್ತೆ. ಕ್ಷುಲ್ಲಕ ಹೇಳಿಕೆ ಕೊಡಿಸುವುದು ಮುನಿಗಳಿಗೆ ಮರ್ಯಾದೆ ಕೊಡುವಂತದ್ದಲ್ಲ. ಜೈನರು ಅಲ್ಪಸಂಖ್ಯಾತರು ಆದರೆ ಸಣ್ಣ ವೋಟ್ ಬ್ಯಾಂಕ್ ಇದೆ ಎನ್ನುವ ಕಾರಣಕ್ಕೆ ದೊಡ್ಡವೋಟ್ ಬ್ಯಾಂಕ್ ಅವನು ಮಾಡಿದ್ದಾನೆ ಅಂತ ಸರ್ಕಾರ ವರ್ತನೆ ಈ ರೀತಿ ಮಾಡೋದಾ? ಎಂದು ಹರಿಹಾಯ್ದರು.

ಮಾಜಿ ಶಾಸಕ ನಿಂಬಣ್ಣವರ ನಿಧನಕ್ಕೆ ಸಂಸದ ಜೋಶಿ ಸಂತಾಪ

ಸಿಎಂ ನಿಂಬಣ್ಣವರ ನಮ್ಮೆಲ್ಲರನ್ನೂ ಅಗಲಿದ್ದಾರೆ. ಕಳೆದ 15 ದಿನಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯೋಕೆ ಬೆಂಗಳೂರಗೆ ಹೋಗಿದ್ರು. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ರು. ನಾನು ಸಂಪರ್ಕಿಸಿದ್ದೆ ಆದ್ರೂ ಸಂಪರ್ಕಕ್ಕೆ ಸಿಗಲಿಲ್ಲ.
ಜಯದೇವ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು. ಅವರ ಮಗನ ಜೊತೆ ಮಾತಾಡಿದ್ವಿ. ಅವರನ್ನು ಭೇಟಿ ಆಗುವ ಮಾತು ಆಗಿತ್ತು. ಆದರೆ ಅಷ್ಟರಲ್ಲಿ ಇಹಲೋಕ ತ್ಯಜಿಸಿದರು.

999 ರಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾ ಇದ್ರು. 2 ಬಾರಿ ಸ್ಪರ್ಧೆ ಮಾಡಲಿಲ್ಲ. 2013-18 ರಲ್ಲಿ ಸ್ಪರ್ಧೆ ಮಾಡಿದ್ರು
2018ಕ್ಕೆ ಶಾಸಕರಾಗಿ ಆರಿಸಿ ಬಂದು ಶಿಸ್ತು ಬದ್ಧ ಪ್ರಾಮಾಣಿಕ ರಾಜಕಾರಣ ಮಾಡಿದ್ರು. ಕೆಲಸವನ್ನು ಕಳಕಳಿಯಿಂದ ಮಾಡಿದ್ರು. ಮೊದಲ ಬಾರಿಗೆ ಆರಿಸಿ ಬಂದಾಗ 70 ವರ್ಷ ವಯಸ್ಸಾಗಿತ್ತು. ಹಿರಿಯ ಕಾರ್ಯಕರ್ತನನ್ನು ಬಿಜೆಪಿ ಹಾಗೂ ಕ್ಷೇತ್ರದ ಜನ ಕಳೆದುಕೊಂಡಿದೆ. ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೋರುತ್ತೇನೆ. ಅಂತ್ಯಕ್ರಿಯೆ ಬಗ್ಗೆ ಕುಟುಂಬದ ಸದಸ್ಯರು ಮಾಹಿತಿ ಕೊಡ್ತಾರೆ. ನಾನು ರಾತ್ರಿ ಅಂತಿಮ ದರ್ಶನ ಪಡೆಯುತ್ತೇನೆ ಎಂದು ಪ್ರಹ್ಲಾದ್​ ಜೋಶಿ ಹೇಳಿದರು.

ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನರಾದ ಜೈನ ಮುನಿ: ಜೈನ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.