ETV Bharat / state

ಸರ್ಕಾರದ ಕಾರ್ಯವೈಖರಿ ಬಗ್ಗೆ ಶೆಟ್ಟರ್ ಗರಂ: ಕೆಲಸ ಮಾಡಿ ಭಾಷಣ ಬೇಡವೆಂದ ಮಾಜಿ ಸಿಎಂ.. - ಈಟಿವಿ ಭಾರತ ಕನ್ನಡ

ಕೈಗಾರಿಕೆ ಸ್ಥಾಪನೆಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಸಹಕಾರ ಸಿಗುತ್ತಿಲ್ಲ, ಕೇವಲ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಹೋಗುತ್ತೇವೆ. ಆದರೆ, ಅನುಷ್ಠಾನ ಕಾರ್ಯ ಆಗುತ್ತಿಲ್ಲ ಎಂದು ಜಗದೀಶ್​ ಶೆಟ್ಟರ್​ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

Kn_hbl_03_s
ಜಗದೀಶ್​ ಶೆಟ್ಟರ್​
author img

By

Published : Oct 3, 2022, 10:55 PM IST

Updated : Oct 4, 2022, 10:32 AM IST

ಹುಬ್ಬಳ್ಳಿ: ಐಟಿ-ಬಿಟಿ ಇಲಾಖೆಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಯಾಂಡ್ ಬೆಂಗಳೂರು ಟೆಕ್ ಉತ್ಸವ ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಸ್ಥಾಪನೆಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಸಹಕಾರ ಸಿಗುತ್ತಿಲ್ಲ. ಕೇವಲ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಹೋಗುತ್ತೇವೆ. ಆದರೆ, ಅನುಷ್ಠಾನ ಕಾರ್ಯ ಆಗುತ್ತಿಲ್ಲ. ಇದನ್ನು ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕೆಲಸ‌ ಮಾಡಿಸಬೇಕು. ಆದರೆ ಫೀಲ್ಡ್​ನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ‌ ಮಾಡುತ್ತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಮಾತಿನಲ್ಲಿ ಮಾಡಿದರೆ ಸಾಲದು, ಕಾರ್ಯ ಆಗಬೇಕು ಎಂದು ಮುರುಗೇಶ್ ನಿರಾಣಿ ವಿರುದ್ಧ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.

ಸರ್ಕಾರದ ಕಾರ್ಯವೈಖರಿ ಬಗ್ಗೆ ಶೆಟ್ಟರ್​ ಅಸಮಧಾನ

ಕಿತ್ತೂರು ಬಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಅಂತ ಕೈಗಾರಿಕಾ ಮಂತ್ರಿ ಹೇಳಿ ಹೋದರು. ಇದು ಸಾಧ್ಯನಾ? ಯಾವುದಾದರೂ ತಂಡ ಭೇಟಿ‌ ಕೊಟ್ಟು ಇದನ್ನು ಸುಳ್ಳು ಅಂತ ಹೇಳಿದರೆ ಭೂಮಿ ಮಂಜೂರು ಮಾಡಲು ಎರಡು ಮೂರು ವರ್ಷಗಳಾಗುತ್ತದೆ. ವಿಶೇಷ ಹೂಡಿಕೆ ವಲಯ ಘೋಷಣೆ ಆಗಿದೆ, ಆದರೆ ಕಾರ್ಯಗತವಾಗಿಲ್ಲ. ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾರ್ಯಗತಗೊಳಿಸಿ ಎಂದರು. ಸಚಿವ ಅಶ್ವತ್ಥನಾರಾಯಣ್​ ತಾವು ಕೆಲಸ ಮಾಡಿಸಬೇಕು. ನಾನು‌ ಸಿಎಂ ಆಗಿದ್ದಾಗ ಇನ್ಫೋಸಿಸ್​ಗೆ ಜಾಗ ನೀಡಿದ್ದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿಲ್ಲ. ಕೇವಲ ಕಾರ್ಯಕ್ರಮ ಮಾಡಿ‌ ಹೋಗುತ್ತೇವೆ, ಕೆಲಸ‌ಗಳು ಆಗುತ್ತಿಲ್ಲ‌ ಎಂದು ಶೆಟ್ಟರ್​ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆಶಿ, ಭ್ರಷ್ಟರಾಮಯ್ಯಗೆ ಶಕ್ತಿ ಬಂದಿದ್ದು ಸುಳ್ಳಲ್ಲ: ಬಿಜೆಪಿ ವಾಗ್ದಾಳಿ

Last Updated : Oct 4, 2022, 10:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.