ETV Bharat / state

ವಿ ಬಾಸ್ಕೆಟ್‌ ಕಂಪನಿಯ ವಾಹನಗಳಿಗೆ ಚಾಲನೆ ನೀಡಿದ ಸಚಿವ ಜಗದೀಶ್ ಶೆಟ್ಟರ್ ! - ಸಚಿವ ಜಗದೀಶ್ ಶೆಟ್ಟರ್ ಲೆಟೆಸ್ಟ್ ನ್ಯೂಸ್

ಸಂಸ್ಥೆ ವತಿಯಿಂದ ರೈತರು ಹಾಗೂ ಗ್ರಾಹಕರಿಗೆ ಶೋಷಣೆಯಾಗದಂತೆ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಬೇಕು‌ ಎಂದು ಸಚಿವರು ಸೂಚನೆ ನೀಡಿದರು..

 shettar ingurate the vehicle of V organization

author img

By

Published : Jul 21, 2020, 4:06 PM IST

ಹುಬ್ಬಳ್ಳಿ: ಮಧುರ ಕಾಲೋನಿಯಲ್ಲಿರುವ ತಮ್ಮ ನಿವಾಸದ ಬಳಿ ‘ವಿ ಬಾಸ್ಕೆಟ್ ಸಂಸ್ಥೆ’ ವತಿಯಿಂದ ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ವಾಹನಗಳಿಗೆ
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ವಾಹನಗಳಿಗೆ ಚಾಲನೆ ನೀಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ವಿ ಬಾಸ್ಕೆಟ್ ಸಂಸ್ಥೆಯಿಂದ ನೇರವಾಗಿ ರೈತರಿಂದ ಹಣ್ಣು ಹಾಗೂ ತರಕಾರಿಗಳನ್ನು ಖರೀದಿ ಮಾಡಲಾಗುವುದು. ಬಳಿಕ ಖರೀದಿಸಿದ ಹಣ್ಣು ಮತ್ತು ತರಕಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಬೇಡಿಕೆಗೆ ಅನುಸಾರ ಗ್ರಾಹಕರಿಗೆ ತಲುಪಿಸಲಾಗುವುದು.

ಸಂಸ್ಥೆ ವತಿಯಿಂದ ರೈತರು ಹಾಗೂ ಗ್ರಾಹಕರಿಗೆ ಶೋಷಣೆಯಾಗದಂತೆ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಬೇಕು‌ ಎಂದು ಸಚಿವರು ಸೂಚನೆ ನೀಡಿದರು. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ರೈತ ಸಂತೆಗಳನ್ನು ಆಯೋಜಿಸಲಾಗುತ್ತಿದೆ.

ಬೇರೆ ರಾಜ್ಯಗಳಲ್ಲಿ ರೈತರ ಸಂತೆ ಯಶಸ್ವಿಯಾಗಿದೆ.‌ ಅಲ್ಲಿನ ಮಾದರಿಗಳನ್ನು ಅಭ್ಯಸಿಸಿ ರಾಜ್ಯದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.