ETV Bharat / state

ಹೈಕಮಾಂಡ್​ಗೆ ರಾಜ್ಯ ಬಿಜೆಪಿ ಮೇಲೆ ಬೇಸರ ಇರುವುದು ನಿಜ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಜಗದೀಶ್ ಶೆಟ್ಟರ್ ತಂದೆ ಜನಸಂಘದಲ್ಲಿ ಇದ್ದವರು, ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡ್ತೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

Former minister KS Eshwarappa spoke at the press conference.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Dec 13, 2023, 10:24 PM IST

Updated : Dec 13, 2023, 10:49 PM IST

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ: ಬಿಜೆಪಿ ಹೈಕಮಾಂಡ್​ ರಾಜ್ಯ ಬಿಜೆಪಿ ಮೇಲೆ ಬೇಸರ ಇರುವುದು ನಿಜ. ಆದರೆ ಕಂಟ್ರೋಲ್ ಇಲ್ಲ ಎಂಬುದು ಸುಳ್ಳು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಮೇಲೆ ಹೈಕಮಾಂಡ್​ಗೆ ಬೇಸರ ಇರುವುದು ಸತ್ಯ. ಯಾವುದಕ್ಕಾಗಿ ಬೇಸರವಿದೆ ಎನ್ನುವುದನ್ನು ತಿಳಿಸಬೇಕು. ನಾವೆಲ್ಲಾ ಒಂದೇ ವಿಷಯ, ಸಿದ್ದಾಂತಕ್ಕೆ ಒಗ್ಗೂಡಿದ್ದೇವೆ. ಹೀಗಾಗಿ ಸಭೆ ನಡೆಸಿ ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.

ಸಂಸತ್ ಅಧಿವೇಶನದಲ್ಲಿ ಅಪರಿಚಿತರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದಿನಿಂದಲೂ ವಿದೇಶಿ ಶಕ್ತಿಗಳು ಭಯೋತ್ಪಾದಕರು, ರಾಷ್ಟ್ರದ್ರೋಹಿಗಳು ಹಿಂದೂಸ್ಥಾನ ಮೇಲೆ ಕಣ್ಣೀಟ್ಟಿದ್ದಾರೆ. ಅದನ್ನು ಎದುರಿಸಿಕೊಂಡು ಕೇಂದ್ರ ಸರ್ಕಾರ ಬಂದಿದೆ. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಇಂದು ಎಲ್ಲ ದೇಶಗಳು ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬರುತ್ತಿವೆ ಎಂದು ವಿವರಿಸಿದರು.

ಇದೀಗ ಭಯೋತ್ಪಾದಕ ಚಟುವಟಿಕೆಗಳು ರಾಷ್ಟ್ರದ ಅನೇಕ ಭಾಗದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ. ಮೊನ್ನೆ ಬೆಂಗಳೂರಿನ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಅದರಂತೆ ಕಲಿಸ್ತಾನಿಗಳು ಎಂದು ಹೇಳಿಕೊಂಡು ಒಳಗಡೆ ನುಗ್ಗಲಾಗಿತು. ಅದರಂತೆ ಇಂದು ನಡೆದ ಘಟನೆಯನ್ನು ಸರ್ಕಾರ ಕೂಲಂಕಷವಾಗಿ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.

ಬಿಜೆಪಿ ನಾಯಕರ ನಡುವೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸಂಘಟನೆಯಲ್ಲಿ ಶಕ್ತಿಶಾಲಿಯಾಗಿದೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ. ಬಿಜೆಪಿ ರಾಜ್ಯದಲ್ಲಿ 1 ಕೋಟಿ ಸದಸ್ಯತ್ವ ಹೊಂದಿದೆ. ಇದೀಗ ಅಸಮಾಧಾನ ವ್ಯಕ್ತಪಡಿಸಿದವರು ಪಕ್ಷ ನಿಷ್ಠರೇ, ಆದರೆ ಅವರು ವೈಯುಕ್ತಿಕ ವಿಚಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಹೊರತು ಪಕ್ಷದಿಂದಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಮುಂದಿನ ದಿನಗಳಲ್ಲಿ ಹೈಕಮಾಂಡ್ ಅವರೊಂದಿಗೆ ಚರ್ಚೆ ನಡೆಸಿ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.

ಜಾತಿಗಣತಿ ಅನುಷ್ಠಾನಕ್ಕೆ ಬಿಜೆಪಿ ಸ್ವಾಗತ: ಜಾತಿಗಣತಿ ಅನುಷ್ಠಾನವನ್ನು ಬಿಜೆಪಿ ಸ್ವಾಗತಿಸಿದೆ. ಆದರೆ ಕಾಂಗ್ರೆಸ್​ನವರು ಮಾತ್ರ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಜಾತಿ ಗಣತಿ ಅನುಷ್ಠಾನದ ಕುರಿತಾಗಿ ಸರ್ಕಾರ ಸರ್ವ ಪಕ್ಷಗಳು, ಸ್ವಾಮೀಜಿಗಳು, ಸಮುದಾಯದ ಮುಖಂಡರ ಸಭೆ ಕರೆದು ಸರ್ವರ ಅಭಿಪ್ರಾಯ ಆಲಿಸಬೇಕೆಂದು ಕೆ.ಎಸ್.ಈಶ್ವರಪ್ಪ ಇದೇ ವೇಳೆ ಕಿವಿ ಮಾತು ಹೇಳಿದರು‌.

ಪ್ರಿಯಾಂಕ್ ಖರ್ಗೆ ಬಚ್ಚಾ, ಅವಕಾಶ ಸಿಕ್ರೆ ನಾನು ಸಿಎಂ ಆಗ್ತೀನಿ ಅಂತಾನೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನರು ಸಿಎಂ ಆಗಲು ಹೊರಟಿದ್ದಾರೆ. ಅಂಬೇಡ್ಕರ್ ಸಂವಿಧಾನದಲ್ಲಿ ಒಬ್ಬರಿಗೆ ಸಿಎಂ ಆಗಲು ಅವಕಾಶ ಕೊಟ್ರು. ಕಾಂಗ್ರೆ‌ಸ್‌ನಲ್ಲಿ ಎಲ್ಲರೂ ನಾನೇ ಅಂಬೇಡ್ಕರ್ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ಶೆಟ್ಟರ್​​ ಅವರನ್ನ ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತೇವೆ:ಜಗದೀಶ್ ಶೆಟ್ಟರ್ ತಂದೆ ಜನಸಂಘದಲ್ಲಿ ಇದ್ದವರು, ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡ್ತೇನೆ. ಮುಸ್ಲಿಮರಲ್ಲಿ ಅನೇಕರು ರಾಷ್ಟ್ರಭಕ್ತರು ಇದ್ದಾರೆ. ಎಲ್ಲ ಮುಸ್ಲಿಮರು ದೇಶದ್ರೋಹಿಗಳಲ್ಲ, ನಾವು ಮುಸ್ಲಿಂ ವಿರೋಧಿಯಲ್ಲ. ಜಮೀರ್ ಅಂತವರು ಧರ್ಮಗಳ ನಡುವೆ ಜಗಳ ಹಚ್ಚುತ್ತಾರೆ. ಕುಮಾರಸ್ವಾಮಿ ಬ್ರದರ್ ಅನ್ನೋದು ಸ್ವಭಾವತಃ, ಆದರೆ ಜಮೀರ್ ಅಹ್ಮದ್ ಬ್ರದರ್ ಅನ್ನೋದು ದುರುದ್ದೇಶದಿಂದ ಕೂಡಿದೆ ಎಂದು ಅಪಾದಿಸಿದರು. ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಲಿಂಗರಾಜ ಅಂಗಡಿ, ರವಿ ನಾಯಕ ಹಾಗೂ ಶಿವಾನಂದ ಮುತ್ತಣ್ಣನವರ್ ಇದ್ದರು.

ಇದನ್ನೂಓದಿ:ಬಿಜೆಪಿ ನಾಯಕರು ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಲಿ: ಸಿಎಂ ಸಿದ್ದರಾಮಯ್ಯ

Last Updated : Dec 13, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.