ETV Bharat / state

ತಪ್ಪು ಮಾಡಿದವರ ಮೇಲೆ ಮಾತ್ರ ಐಟಿ ಇಡಿ ದಾಳಿ ಆಗುತ್ತೆ: ಸಿಎಂ ಬೊಮ್ಮಾಯಿ ತಿರುಗೇಟು - CM Basavaraja Bommai

ಪ್ರತಿ ಮನೆಗೂ ಹೋಗಿ ಪ್ರಚಾರ ನಡೆಸುವಂತೆ ಅಭ್ಯರ್ಥಿಗಳಿಗೆ ಬೊಮ್ಮಾಯಿ ಸೂಚನೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : May 8, 2023, 2:17 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯಾದ್ಯಂತ ಇಂದು ಅಂತಿಮ ಹಂತದ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ನಾಳೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಂತಹದ್ದು ಪ್ರಾರಂಭವಾಗಲಿದೆ. ತಮ್ಮ ತಮ್ಮ ಕ್ಷೇತ್ರದ ಪ್ರತಿ ಮನೆಗೂ ಹೋಗಿ ಪ್ರಚಾರ ಮಾಡುವಂತೆ ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ‌ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 1.5 ಲಕ್ಷ ಕೋಟಿ ಭ್ರಷ್ಟಾಚಾರದ ಹಣ ರೈತರಿಗೆ ಹಂಚುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಬ್ಬಾ ಎಲ್ಲಿಂದ ತರ್ತಾರೆ, ಇದನ್ನು ನೀವು ಪತ್ರಕರ್ತರು ನಂಬ್ತೀರಲ್ಲ. ನಂಬಿ ನನ್ನ ಪ್ರಶ್ನೆ ಕೇಳ್ತಿರಲ್ಲ. ನನಗೆ ಆಶ್ಚರ್ಯ ಆಗಿದೆ. ನಾನು ಚುನಾವಣಾ ಆಯೋಗಕ್ಕೆ ಕೇಳಿದೆ. ಇದಕ್ಕೆ ಏನು ಫ್ರೂಪ್ ಇದ್ದರೆ ಕೊಡಿ ಅಂತ. ಆದರೆ ಕೊಡೋಕೆ ಆಗಿಲ್ಲ ಅವರಿಗೆ. ಇದುವರೆಗೆ ಒಂದೇ ಒಂದು ಕೇಸ್ ಇಲ್ಲ, ಸಾಕ್ಷಿ ಇಲ್ಲ ಅವರ ಹತ್ರ. ಇಷ್ಟೆಲ್ಲಾ ಮಾತಾಡೋ ಕಾಂಗ್ರೆಸ್ ಮೇಲೆ ಕೇಸ್ ಇಲ್ವಾ, ತಮ್ಮ ಮೇಲೇಯೇ ಕೇಸ್ ಇದ್ದು, ಅವರಿಂದ ಅವುಗಳಿಗೇನೆ ಕೋರ್ಟ್​ನಲ್ಲಿ ಉತ್ತರ ಕೊಡೋಕೆ ಆಗ್ತಿಲ್ಲ ಎಂದರು.

ವೀರಶೈವ ಲಿಂಗಾಯತ ಮಹಾಸಭಾ ಕಾಂಗ್ರೆಸ್ ಬೆಂಬಲಿಸಿ ನಿರ್ಣಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ವೀರಶೈವ ಯಾವುದೇ ಸಂಸ್ಥೆಯಡಿ ಸೀಮಿತ ಆಗಿಲ್ಲ, ಅದಕ್ಕೆ ಬಹಳ ಗೌರವ ಕೊಡುತ್ತೇವೆ. ಚುನಾವಣಾ ಸಂದರ್ಭದಲ್ಲಿ ವೀರಶೈವ ಮಹಾಸಭಾ ಬಳಕೆ ಮಾಡೋದು ಸರಿ ಅಲ್ಲ. ಇದುವರೆಗೆ ಆಗಿಲ್ಲ, ಇದು ಆಗಬಾರದು. ಲಿಂಗಾಯತ ವೇದಿಕೆ ಅನ್ನೋದು ಎಲ್ಲಿಯೂ ಇಲ್ವೇ ಇಲ್ಲ. ನಾಲ್ಕು ಜನರು ಸೇರಿ ಏನೋ ಹೇಳಿದರೆ ಇಡೀ ಲಿಂಗಾಯತ ಸಮುದಾಯ‌ ಧ್ವನಿ ಆಗುತ್ತಾ, ಅದು ಸಮುದ್ರ, ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂತವೆಲ್ಲ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ ಎಂದರು.

ಐಟಿ, ಇಡಿ ದಾಳಿ ಕಾಂಗ್ರೆಸ್ ಬೆಂಬಲಿಗರ ಮೇಲೆ ಆಗುತ್ತಿವೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಇಡಿ ಕೇಂದ್ರದಲ್ಲಿ ಮಾತ್ರವಲ್ಲ, ಪ್ರತಿ ಜಿಲ್ಲೆಯಲ್ಲೂ ಇದೆ. ಅಲ್ಲಿ ಐಟಿ, ಇಡಿ ಅಧಿಕಾರಿಗಳು ಇದ್ದಾರೆ. ಯಾರು ತಪ್ಪು ಮಾಡಿದ್ದಾರೆ, ಎಲ್ಲಿ ಮಾಡಿದ್ದಾರೆ ಎನ್ನುವ ಮಾಹಿತಿ ಸಿಗುತ್ತೋ ಅಲ್ಲಿಗೆ ತಂಡದೊಂದಿಗೆ ದಾಳಿ ಮಾಡುತ್ತಾರೆ. ಕಾಂಗ್ರೆಸ್​ನವರು ತಪ್ಪು ಮಾಡಿದ್ರೆ ನಾವೇನು ಮಾಡಲು ಸಾಧ್ಯ. ಎಲ್ಲಿ ತಪ್ಪು ಆಗಿದೆ ಅಲ್ಲಿ ದಾಳಿ ಆಗುತ್ತೆ. ಕಾಂಗ್ರೆಸ್​ನವರು ಮಾತ್ರವಲ್ಲ ಬಿಜೆಪಿಯವರ ಮೇಲೂ ದಾಳಿ ಆಗಿದೆ.

ಕಾಂಗ್ರೆಸ್​ನವರು ಬೋಗಿ, ಯಾವಾಗಲೂ ಮುಂಚೇನೇ ನಮ್ಮ ಮೇಲೆ ರೈಡ್​ ಆಗುತ್ತೆ ಅಂದ ಹೇಳಿಬಿಡ್ತಾರೆ. ಅವರು ಮಾಡೊದು ನಿಜ. ಅದನ್ನು ತಪ್ಪಿಸಲು ಈಥರ ಮಾಡ್ತಾರೆ. ಎಂ.ಬಿ. ಪಾಟೀಲ ಹೇಳ್ತಾರೆ, ಹೆಬ್ಬಾಳ್ಕರ್ ಕೂಡ ಹಾಗೆಯೇ ಹೇಳ್ತಾರೆ. ಅವರು ಮಾಡೊದು ನಿಜ, ಅದನ್ನು ತಪ್ಪಿಸೋದಕ್ಕೆ ಹೇಳ್ತಾರೆ. ಅವರು ತಪ್ಪು ಮಾಡೋದನ್ನು ಬಿಡಲು ಹೇಳಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ನೋಡುತ್ತಿದೆ: ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.