ಧಾರವಾಡ: ಬೆಂಗಳೂರು ಮೂಲದ ಪೊಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ ಹಿನ್ನೆಲೆ ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇರಾನಿ ಗ್ಯಾಂಗ್ನ ಆರೋಪಿ ಬಿಲಾಲ್ನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಗುರುವಾರ ಮಧ್ಯಾಹ್ನದ ಸುಮಾರಿಗೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಆಗಮಿಸಿದ್ದ ಪಿಎಸ್ಐ ಸಂತೋಷ ಹಾಗೂ ಎಸಿಪಿ ಸ್ಕ್ವಾಡ್ ಕೃಷ್ಣಪ್ಪ ಲಿಂಗೇಗೌಡ ಮೇಲೆ ಹಲ್ಲೆ ಮಾಡಿದ್ದರು.
ಬಂಧಿತ ಇರಾನಿ ಗ್ಯಾಂಗ್ ಮೇಲೆ ಸರಳಗಳ್ಳತನ ಆರೋಪವಿತ್ತು. ಆ ಹಿನ್ನೆಲೆ ಬೆಂಗಳೂರಿನಿಂದ ಆಗಮಿಸಿದ ಪೊಲೀಸರು, ಗ್ಯಾಂಗ್ನ ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ ಅವರ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದರು. ಇದೀಗ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.