ETV Bharat / state

ಹತ್ಯೆಗೆ ಸ್ಕೆಚ್ ಹಾಕುವ ಬದಲು ಸ್ವಲ್ಪ ವಿಷ ನೀಡಿದ್ರೆ ಆಗ್ತಿತ್ತು .. - accused Basavaraja Muttagi news

ಹಂತಕರಿಗೆ ಕಂಟ್ರಿ ಪಿಸ್ತೂಲ್​​ ಪೂರೈಸಿದ ಆರೋಪಿಗಳು ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪರಸ್ಪರ ಎದುರು ಕೂರಿಸಿ ವಿಚಾರಣೆ ನಡೆಸಿ ಸಿಬಿಐ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ..

ಆರೋಪಿ ಬಸವರಾಜ ಮುತ್ತಗಿ
ಆರೋಪಿ ಬಸವರಾಜ ಮುತ್ತಗಿ
author img

By

Published : Dec 16, 2020, 12:09 PM IST

ಧಾರವಾಡ : ಜಿಲ್ಲಾ ಪಂಚಾಯತ್‌ ಸದಸ್ಯರಾಗಿದ್ದ ಯೋಗೇಶ್ ‌ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಇಂದು ಕೂಡ ಮುಂದುವರೆದಿದೆ. ‌ಉಪನಗರ‌ ಪೊಲೀಸ್ ಠಾಣೆಗೆ ಆಗಮಿಸಿ ಆರೋಪಿ ಬಸವರಾಜ ಮುತ್ತಗಿ ವಿಚಾರಣೆ ಎದುರಿಸಿದ್ದಾರೆ.

ವಿಚಾರಣೆಗೆ ಹಾಜರಾದ ಆರೋಪಿ ಬಸವರಾಜ ಮುತ್ತಗಿ

ಸಹ ಆರೋಪಿಗಳೊಂದಿಗೆ ಬಸವರಾಜ ಮುತ್ತಗಿ ವಿಚಾರಣೆಗೆ ಆಗಮಿಸಿದರು. ಸಿಬಿಐ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ವಿಚಾರಣೆಯನ್ನ ತೀವ್ರಗೊಳಿಸಿದೆ. ನಿನ್ನೆ ನ್ಯಾಯಾಲಯದಿಂದ ಸಿಬಿಐ ಅಧಿಕಾರಿಗಳು ಇಂಡಿಯನ್ನು ತಮ್ಮ ವಶಕ್ಕೆ ಪಡೆದಿದ್ದರು.

ಹಂತಕರಿಗೆ ಕಂಟ್ರಿ ಪಿಸ್ತೂಲ್​​ ಪೂರೈಸಿದ ಆರೋಪಿಗಳು ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪರಸ್ಪರ ಎದುರು ಕೂರಿಸಿ ವಿಚಾರಣೆ ನಡೆಸಿ ಸಿಬಿಐ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಓದಿ:ಜಾಮೀನಿಗಾಗಿ ಹೈಕೋರ್ಟ್​ ಮೊರೆ ಹೋದ ಮಾಜಿ ಸಚಿವ: ವಿನಯ್​ ಕುಲಕರ್ಣಿ ಸೋದರ ಮಾವನನ್ನು ಕಸ್ಟಡಿಗೆ ಪಡೆದ ಸಿಬಿಐ

ವಿಚಾರಣೆ ಮುಗಿಸಿ ಹೊರ ಬಂದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ, ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆ ಚಂದ್ರಶೇಖರ ಇಂಡಿ ಅರೆಸ್ಟ್​​ ಆಗಿದ್ದು, ದೀರ್ಘಕಾಲದ ವಿಚಾರಣೆ ನಡೆಯುತ್ತಿದೆ.

ನಿಮ್ಮ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜೀರ್ಣಿಸಿಕೊಳ್ಳದಂತಹ ವಿಷಯ ಐತಿ. ಹತ್ಯೆಗೆ ಸ್ಕೆಚ್ ಹಾಕುವ ಬದಲಾಗಿ ಸ್ವಲ್ಪ ವಿಷ ನೀಡಿದ್ರೆ ನಡೆಯುತ್ತಿತ್ತು ಎಂದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.