ಹುಬ್ಬಳ್ಳಿ: ಕಲಘಟಗಿ ಪಟ್ಟಣದಲ್ಲಿನ ಮದ್ಯದಂಗಡಿ ಮುಚ್ಚುವಂತೆ ಮಹಿಳೆಯರು ಅಬಕಾರಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ನಗರದ ಮದ್ಯದಂಗಡಿ ಎದುರು ಜಮಾಯಿಸಿದ್ದ ಮಹಿಳೆಯರು, ಜನವಸತಿ ಪ್ರದೇಶ, ಶಾಲೆ, ದೇವಸ್ಥಾನ, ರಾಷ್ಟ್ರೀಯ ಹೆದ್ದಾರಿಯನ್ನದೇ ಕಾನೂನು ನಿಯಮವನ್ನು ಉಲ್ಲಂಘಿಸಿ ಮದ್ಯದಂಗಡಿಯನ್ನು ತೆರೆಯಲಾಗಿದೆ ಎಂದು ಆರೋಪಿಸಿದರು.
ಮದ್ಯದಂಗಡಿ ಆರಂಭದಿಂದ ಸಂಸಾರಗಳು ಬೀದಿಪಾಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಕೂಡಲೇ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿದರು.