ETV Bharat / state

ಪೇಡಾನಗರಿಯ 2.5 ವರ್ಷದ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ಗೆ ಸೇರ್ಪಡೆ - ಎರಡೂವರೆ ವರ್ಷದ ಬಾಲಕಿ ಸುದ್ದಿ

ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆ, 1 ರಿಂದ 70 ರ ವರೆಗೆ ಅಂಕಿಗಳ ಗುರುತಿಸುವಿಕೆ. ಅನೇಕ ಪ್ರಾಣಿ- ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡಿ ತನ್ನ ಸ್ಪಷ್ಟವಾದ ವಾಕ್ ಚಾತುರ್ಯ ದಿಂದ ಎಳೆಯ ವಯಸ್ಸಿನಲ್ಲಿ ಭಾರತದಲ್ಲಿ ಈ ದಾಖಲೆ ಬರೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ

author img

By

Published : Jun 26, 2020, 8:46 AM IST

ಧಾರವಾಡ: ಎರಡೂವರೆ ವರ್ಷದ ಪುಟಾಣಿ ಬಾಲಕಿಯೊಬ್ಬಳು ತನ್ನ ತೊದಲುನುಡಿಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳು, ರಾಷ್ಟ್ರೀಯ ನಾಯಕರು, ಇತಿಹಾಸದ ಘಟನಾವಳಿಗಳು, ಪ್ರಾಣಿ, ಪಕ್ಷಿಗಳ ಅನುಕರಣೆ ಮಾಡುವ ಮೂಲಕ ತನ್ನ ವಿಶಿಷ್ಟ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿದ್ದಾಳೆ.

ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ
ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ

ಮೂಲತಃ ಧಾರವಾಡ ತಾಲೂಕಿನ ಜೋಡಳ್ಳಿ (ಜಿ.ಬಸವನಕೊಪ್ಪ) ಗ್ರಾಮದವರಾದ ಉಮೇಶ ಮುತ್ತಗಿ ಹಾಗೂ ಸಕ್ಕೂಬಾಯಿ ದಂಪತಿಯ ಎರಡೂವರೆ ವರ್ಷದ ಮಗು ವೈಷ್ಣವಿ ಈ ಸಾಧನೆ ಮಾಡಿದ್ದಾಳೆ.

ಬಾಲಕಿಯ ತಂದೆ ಉಮೇಶ ಮುತ್ತಗಿ ಉತ್ತರ ಪ್ರದೇಶದ ಮಥುರಾದಲ್ಲಿ ಭಾರತೀಯ ಸೇನೆಯ 51 ಮೀಡಿಯಂ ರೆಜಿಮೆಂಟ್ ನ ಹವಾಲ್ದಾರರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಮಗಳು ವೈಷ್ಣವಿ ಕಳೆದ ಮಾರ್ಚ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಪ್ರತಿಭೆಯ ಮೂಲಕ ದಾಖಲೆ ಬರೆದಿದ್ದಾಳೆ. ವೈಷ್ಣವಿ ಕೇವಲ ಎರಡೂವರೆ ವರ್ಷದಲ್ಲಿ ಸ್ಪಷ್ಟವಾಗಿ ರಾಷ್ಟ್ರಗೀತೆ, ಐದು ಸಂಸ್ಕೃತದ ಮಂತ್ರಗಳು, 170 ಇತಿಹಾಸದ ಮತ್ತು ಈಗಿನ ಶ್ರೇಷ್ಠ ನಾಯಕರ ಹೆಸರು ಹೇಳುವುದು, ಪ್ರಾಣಿಗಳ, ಪಕ್ಷಿಗಳ, ಹಣ್ಣುಗಳು, ತರಕಾರಿಗಳು, ಸೌರ ಮಂಡಲದ ಗ್ರಹಗಳ ಹೆಸರು, ಗಣಿತದ ಚಿಹ್ನೆಗಳು, ವಾರಗಳ ಹೆಸರು, ತಿಂಗಳುಗಳು, ಶರೀರದ ಭಾಗಗಳ ಹೆಸರುಗಳನ್ನು ನಿಖರವಾಗಿ ಹೇಳುತ್ತಾಳೆ.

ತಂದೆ ತಾಯಿ ಜೊತೆ ಬಾಲಕಿ
ತಂದೆ ತಾಯಿ ಜೊತೆ ಬಾಲಕಿ

ಜೊತೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆ, 1 ರಿಂದ 70 ರ ವರೆಗೆ ಅಂಕಿಗಳ ಗುರುತಿಸುವಿಕೆ. ಅನೇಕ ಪ್ರಾಣಿ- ಪಕ್ಷಿ ಗಳ ಧ್ವನಿಯನ್ನು ಅನುಕರಣೆ ಮಾಡಿ ತನ್ನ ಸ್ಪಷ್ಟವಾದ ವಾಕ್ ಚಾತುರ್ಯ ದಿಂದ ಎಳೆಯ ವಯಸ್ಸಿನಲ್ಲಿ ಭಾರತದಲ್ಲಿ ಈ ದಾಖಲೆ ಬರೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.