ಹುಬ್ಬಳ್ಳಿ: ಕೊರೊನಾ ಹಿನ್ನೆಲೆ ಐ ಸೇವರ್ಸ್ ಆಪ್ಟಿಕಲ್ನಲ್ಲಿ ಕನ್ನಡಕ ಮತ್ತು ಚೌಕಟ್ಟುಗಳನ್ನು ಸೋಂಕು ರಹಿತಗೊಳಿಸಲು ಸ್ಥಾಪಿಸಲಾಗಿರುವ ಕೊರೊನಾ ಓವೆನ್ಅನ್ನು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿದರು.
ಕೊರೊನಾ ವೈರಸ್ಗಳ ಜೀವಕೋಶದ ರಚನೆ ಮತ್ತು ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಈ ಓವೆನ್ ವಿನ್ಯಾಸಗೊಳಿಸಲಾಗಿದೆ. ಯುವಿಸಿ ಚೇಂಬರ್ ಒಳಗೊಂಡಿರುವ ಇದು ಎಲ್ಲಾ ರೀತಿಯ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
ಕನ್ನಡಕವನ್ನು ಸೋಂಕು ರಹಿತಗೊಳಿಸಲು 360 ಡಿಗ್ರಿ ನೇರಳಾತೀತ ಬೆಳಕನ್ನು ಹೊಂದಿರುವ ಯುವಿ-ಸಿ 294 ಎನ್ಎಂ ತರಂಗಾಂತರವನ್ನು ಈ ಓವೆನ್ನಲ್ಲಿ ಬಳಸಲಾಗುತ್ತದೆ. ಇದನ್ನು ಸರ್ಕಾರ ಇ-ಮಾರುಕಟ್ಟೆ ಜಿಇಎಂ ಎಂದು ಪಟ್ಟಿ ಮಾಡಿದೆ. ಐ ಸೇವರ್ಸ್ ಈ ತಂತ್ರಜ್ಞಾನ ಪ್ರಾರಂಭಿಸಿದ ಉತ್ತರ ಕರ್ನಾಟಕದ ಮೊದಲ ಆಪ್ಟಿಕಲ್ ಆಗಿದೆ.