ETV Bharat / state

Job Alert! ಲೈಬ್ರರಿ ಸೈನ್ಸ್​ ಪದವಿ ಮಾಡಿದ್ದೀರಾ? ಧಾರವಾಡ IITಯಲ್ಲಿದೆ ಉದ್ಯೋಗ

IIT Dharwad Recruitment: ಧಾರವಾಡ ಐಐಟಿಗೆ ಈ ನೇಮಕಾತಿ ನಡೆಯಲಿದ್ದು, ಸಂಪೂರ್ಣ ವಿವರ ಇಲ್ಲಿದೆ.

IIT Dharwad Recruitment for Library Trainee post

author img

By

Published : Aug 8, 2023, 10:54 PM IST

ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಧಾರವಾಡದಲ್ಲಿ ಖಾಲಿ ಇರುವ ಲೈಬ್ರರಿ ಸೈನ್ಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಉತ್ತಮ ಸಂವಹನ ಮತ್ತು ತಂತ್ರಜ್ಞಾನ ಕೌಶಲ ಹೊಂದಿರುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಹುದ್ದೆಗಳು: 2 ಲೈಬ್ರಿ ಟ್ರೈನಿ ಹುದ್ದೆಗೆ ನೇಮಕಾತಿ.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಧಿಸೂಚನೆ
ಅಧಿಸೂಚನೆ

ವೇತನ- ಹುದ್ದೆಯ ಅವಧಿ: ಹುದ್ದೆಗಳು ತಾತ್ಕಾಲಿಕ. ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಮತ್ತೆ 12 ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗುತ್ತದೆ. ಮಾಸಿಕ 20 ಸಾವಿರ ರೂ ವೇತನವಿದೆ.

ವಯೋಮಿತಿ: ಗರಿಷ್ಠ ವಯೋಮಿತಿ 27 ವರ್ಷ.

ಆಯ್ಕೆ: ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್​ ಮಾಡಿ, ಲಿಖಿತ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಶೈಕ್ಷಣಿಕ ವಿವರ ಸೇರಿದಂತೆ ಅಗತ್ಯ ಮಾಹಿತಿ ನಮೂದಿಸಬೇಕು. ಅರ್ಜಿ ಸಲ್ಲಿಕೆ ಆಗಸ್ಟ್​ 2ರಿಂದ ಆರಂಭವಾಗಿದ್ದು, ಆಗಸ್ಟ್​ 25 ಕಡೇಯ ದಿನ. ಐಐಟಿ ಧಾರವಾಡ ಅಧಿಕೃತ ಜಾಲತಾಣ iitdh.ac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕವಿಲ್ಲ.

ಇದನ್ನೂ ಓದಿ: Job Alert! ಯಾದಗಿರಿ ಜಿಲ್ಲಾ ಪಂಚಾಯತ್​​ನಲ್ಲಿದೆ ನೌಕರಿ: 35 ಸಾವಿರ ರೂಪಾಯಿ ವೇತನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.