ETV Bharat / state

ರಾಜ್ಯದಲ್ಲಿ SDPI, PFI ಬ್ಯಾನ್ ಮಾಡೋದಕ್ಕೆ ನನ್ನದು ಸಹಮತ ಇದೆ: ಶಾಸಕ ಬೆಲ್ಲದ್​ - ದಕ್ಷಿಣ ಕನ್ನಡ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು

ಮಂಗಳೂರಿನ ಪ್ರವೀಣ್ ಹತ್ಯೆ ಆಗಬಾರದು ಅದು ನೋವು ತರಿಸಿದೆ. ಕೆಲ ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಈ ಬೇಸರ ಹೋಗಲ್ಲ. ಅದಕ್ಕಾಗಿಯೇ ಸಿಎಂ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಲು ನನ್ನದು ಸಹಮತ ಇದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

MLA Arvind Bellad spoke in Dharwad
ಶಾಸಕ ಅರವಿಂದ್ ಬೆಲ್ಲದ್
author img

By

Published : Jul 29, 2022, 5:19 PM IST

Updated : Jul 29, 2022, 5:33 PM IST

ಧಾರವಾಡ: ರಾಜ್ಯದಲ್ಲಿ SDPI, PFI ಬ್ಯಾನ್ ಮಾಡೋದಕ್ಕೆ ನನ್ನದು ಸಹಮತ ಇದೆ. ಕೇವಲ ಬ್ಯಾನ್ ಮಾಡಿದ್ರೆ ಮಾತ್ರ ಸಾಲದು, ಅಂತವರ ಮೇಲೆ ಕ್ರಮ ಆಗಬೇಕು. ಒಂದು ಸಂಘಟನೆ ಬ್ಯಾನ್ ಆದ್ರೆ, ಬೇರೆ ಸಂಘಟನೆ ಸೇರಿಕೊಳ್ಳುತ್ತಾರೆ. ಹೀಗಾಗಿ ಸಂಘಟನೆಗಳ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಶಾಸಕ ಅರವಿಂದ್ ಬೆಲ್ಲದ್ ಆಗ್ರಹಿಸಿದ್ದಾರೆ.

ಶಾಸಕ ಅರವಿಂದ್ ಬೆಲ್ಲದ್

ಮಂಗಳೂರಿನ ಪ್ರವೀಣ್ ಹತ್ಯೆ ಆಗಬಾರದು ಅದು ನೋವು ತರಿಸಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಅದು ಆಗಬಾರದು ಅನ್ನೋ ಕಾರಣಕ್ಕೆ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಈ ರೀತಿ ಹತ್ಯೆಯಾದಾಗ ಕಾರ್ಯಕರ್ತರಲ್ಲಿ ಬೇಸರ ಆಗೋದು ಸಹಜ. ಕೆಲ ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಈ ಬೇಸರ ಹೋಗಲ್ಲ. ಅದಕ್ಕಾಗಿಯೇ ಸಿಎಂ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಕಾರ್ಯಕರ್ತರನ್ನ ಮನವೊಲಿಸಲು ಕೆಲ ಸಮಯ ಬೇಕಾಗುತ್ತದೆ. ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ ಎನ್ನುವ ಕೈ ನಾಯಕರ ಹೇಳಿಕೆ ವಿಚಾರ ಕೇವಲ ಟೀಕೆ ಮಾಡೋದೇ ಅವರ ಕಾಯಕ. ಸರ್ಕಾರ ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೆ ಎಂದರು.

ಇದನ್ನೂ ಓದಿ: ಬಿಜೆಪಿಗೆ ಯುವ ಮೋರ್ಚಾ ಕಾರ್ಯಕರ್ತರ ಕೊಡುಗೆ ಏನು?, ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ: ಈಶ್ವರಪ್ಪ ಆಕ್ರೋಶ

Last Updated : Jul 29, 2022, 5:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.