ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜಾರಾವ್ (ದೊರೈರಾಜ್) ಮಣಿಕುಂಟ್ಲಾ ಹಾಗೂ ಸುಧಾ ಮಣಿಕುಂಟ್ಲಾ ದಂಪತಿ ಸ್ಪರ್ಧಿಸಿದ್ದರು. ಪತ್ನಿ ಸುಧಾ ಸೋಲು ಕಂಡಿದ್ದು, ಪತಿ ರಾಜಾರಾವ್ 500 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ವಾರ್ಡ್ 61ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾರಾವ್ ಸ್ಪರ್ಧಿಸಿದ್ದರು. ಅವರ ಪತ್ನಿ ಸುಧಾ ಅವರು ಪಕ್ಕದ ಮಹಿಳಾ ಮೀಸಲು ವಾರ್ಡ್ 59ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಸುಧಾ ಅವರು ಕಳೆದ ಬಾರಿ 49ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ವಾರ್ಡ್‌ಗಳ ಮರು ವಿಂಗಡಣೆ ಬಳಿಕ ಅವರು ಪ್ರತಿನಿಧಿಸಿದ್ದ ವಾರ್ಡ್‌ನ ಪ್ರದೇಶಗಳು ವಾರ್ಡ್ 61 ಮತ್ತು 59ರಲ್ಲಿ ಹಂಚಿ ಹೋಗಿದ್ದವು.
ಓದಿ: ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಕುಂದಾನಗರಿ.. ಕಾಂಗ್ರೆಸ್, ಎಂಇಎಸ್ ಧೂಳೀಪಟ