ETV Bharat / state

ತುಪ್ಪದ ಬೆಡಗಿಗೆ 'ಬಿಸಿ' ಮುಟ್ಟಿಸಿದ ಹು-ಧಾ ಮಹಾನಗರ ಪಾಲಿಕೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿದ್ದ ರಾಗಿಣಿಯನ್ನು ಕೈಬಿಡಲಾಗಿದೆ. ಆದರೆ ಡ್ರಗ್ಸ್ ಕೇಸ್ ನಲ್ಲಿ‌ ನಟಿ ಹೆಸರು ಕೇಳಿ‌ ಬರುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿ ಸ್ಥಾನದಿಂದ ಕೈಬಿಡಲಾಗಿದೆ.

author img

By

Published : Sep 8, 2020, 10:19 AM IST

Updated : Sep 8, 2020, 11:01 AM IST

huda-municipal-corporation-left-ragini-as-ambassador
ರಾಗಿಣಿಯನ್ನು ರಾಯಭಾರಿ ಸ್ಥಾನದಿಂದ ಕೈ ಬಿಟ್ಟ ಹು-ಧಾ ಮಹಾನಗರ ಪಾಲಿಕೆ

ಹುಬ್ಬಳ್ಳಿ: ಸದ್ಯ ಡ್ರಗ್ಸ್​​ ವಿಚಾರವಾಗಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಶಾಕ್​ ನೀಡಿದೆ. ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿದ್ದ ರಾಗಿಣಿಯನ್ನು ಕೈಬಿಡಲಾಗಿದೆ.

ಈ ಹಿಂದೆ ಸಾಕಷ್ಟು ಬಾರಿ ಹುಬ್ಬಳ್ಳಿ‌-ಧಾರವಾಡ ಪಾಲಿಕೆಯ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಭಾಗಿಯಾಗಿದ್ದರು.‌ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಯಭಾರಿಯಾಗಿದ್ದರು. ಈ ಹಿಂದೆ ಬಿಜೆಪಿ ಶಾಸಕರೊಂದಿಗೆ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಿದ್ದರು. ಅನೇಕ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಡ್ರಗ್ಸ್ ಕೇಸ್ ನಲ್ಲಿ‌ ನಟಿ ಹೆಸರು ಕೇಳಿ‌ ಬರುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಯಭಾರಿ ಸ್ಥಾನದಿಂದ ಅವರನ್ನು ಕೈಬಿಡಲಾಗಿದೆ.

ನಮ್ಮ ಪಾಲಿಕೆಯಲ್ಲಿ ಸದ್ಯಕ್ಕೆ ಯಾರು ರಾಯಭಾರಿಗಳು ಇಲ್ಲವೆಂದು ಮಹಾನಗರ ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Last Updated : Sep 8, 2020, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.