ETV Bharat / state

ಸಂಪಾದನೆಯಲ್ಲಿ ಐತಿಹಾಸಿಕ ದಾಖಲೆ ಬರೆದ ನೈಋತ್ಯ ರೈಲ್ವೆ - ಪ್ಯಾಸೆಂಜರ್ ರೈಲಿನ ಆದಾಯ

ನೈಋತ್ಯ ರೈಲ್ವೆ ಕೋವಿಡ್​ ನಂತರ ಚೇತರಿಕೆ ಕಂಡಿದ್ದು, ಪ್ಯಾಸೆಂಜರ್ ರೈಲಿನ ಆದಾಯದಲ್ಲಿ ಇತಿಹಾಸ ನಿರ್ಮಿಸುವ ದಾಖಲೆಯ ಗಳಿಕೆಯನ್ನು ಮಾಡಿದೆ.

hubli-south-western-railway-set-a-historic-record-in-revenue
ಸಂಪಾದನೆಯಲ್ಲಿ ಐತಿಹಾಸಿಕ ದಾಖಲೆ ಬರೆದ ನೈಋತ್ಯ ರೈಲ್ವೆ
author img

By

Published : Sep 14, 2022, 10:05 AM IST

ಹುಬ್ಬಳ್ಳಿ : ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ ಈಗ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದೆ. ಪಂಚ ತಿಂಗಳ ಆದಾಯ ಗಳಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ. ಏಪ್ರಿಲ್​ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿಯೇ ಪ್ಯಾಸೆಂಜರ್ ರೈಲು ಸಂಚಾರದ ಮೂಲಕ 1,048 ಕೋಟಿ ಆದಾಯವನ್ನು ಗಳಿಸುವ ಮೂಲಕ ನೈಋತ್ಯ ರೈಲ್ವೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ.

ಕಳೆದ ವರ್ಷ ಏಪ್ರಿಲ್​ನಿಂದ ಆಗಸ್ಟ್​ವರೆಗೆ 450 ಕೋಟಿ ಆದಾಯ ಗಳಿಸಿತ್ತು. ಆದರೆ ಈಗ ಹಳೆಯ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆಗೆ ನಾಂದಿ ಹಾಡಿದೆ. ಇನ್ನೂ ಕೋವಿಡ್ ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲು ಸೇವೆ ಬಂದ್​​ ಮಾಡಲಾಗಿತ್ತು. ಆದರೆ ಕೋವಿಡ್ ನಂತರ ಚೇತರಿಕೆ ಕಂಡಿರುವ ನೈಋತ್ಯ ರೈಲ್ವೆ ಪ್ಯಾಸೆಂಜರ್ ರೈಲಿನಲ್ಲಿಯೇ ಹೊಸ ಸಾಧನೆ ಮಾಡಿದೆ.

ಸಂಪಾದನೆಯಲ್ಲಿ ಐತಿಹಾಸಿಕ ದಾಖಲೆ ಬರೆದ ನೈಋತ್ಯ ರೈಲ್ವೆ

ದ್ವೀಪಥ ಕಾಮಗಾರಿ, ವಿದ್ಯುತೀಕರಣ ಹಾಗೂ ಬಹುತೇಕ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಇಂತಹದೊಂದು ದಾಖಲೆ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯ ಸಾರಿಗೆ ಸೇವೆ ಹಾಗೂ ಸರಕು ಸಾಗಣೆಯನ್ನು ಕೂಡ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ರೈಲ್ವೆ ಪ್ರತಿಯೊಂದು ವಲಯದಲ್ಲಿ ಸಾಧನೆ ಮಾಡುತ್ತ ಬಂದಿರುವುದು ವಿಶೇಷವಾಗಿದೆ.

ಇದನ್ನೂ ಓದಿ :ವೀಸಾ ಇದ್ದರೂ ವಿಮಾನ ಹತ್ತಲು ನಿರಾಕರಣೆ: ₹2.3 ಲಕ್ಷ ಪರಿಹಾರ ನೀಡುವಂತೆ ಬ್ರಿಟಿಷ್ ಏರ್ವೇಸ್​ಗೆ ಕೋರ್ಟ್​ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.