ETV Bharat / state

ಬಿಹಾರ ಮೂಲದ ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣ: ಹುಬ್ಬಳ್ಳಿಯಲ್ಲಿ 8 ಜನ ಆರೋಪಿಗಳ ಬಂಧನ

ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೊಲೀಸರು ನಗರದ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

Hubli police Arrested eight   accused
ಹಲ್ಲೆಗೊಳಗಾದ ಬಿಹಾರ ಮೂಲದ ಕಾರ್ಮಿಕರು
author img

By

Published : Jan 2, 2020, 1:15 PM IST

ಹುಬ್ಬಳ್ಳಿ: ನಗರದ ಪಿ.ಬಿ. ರಸ್ತೆ ಬಂಕಾಪುರ ಚೌಕ ಬಳಿ ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೊಲೀಸರು ನಗರದ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಬಿಹಾರ ಮೂಲದ ಕಾರ್ಮಿಕರು

ಪ್ರಕರಣದಲ್ಲಿ ಬಿಡನಾಳದ ಅಹಮ್ಮದಸಾಬ್​ ಎಸ್. ನದಾಫ್, ನಾಗರಾಜ ಎಸ್ ಪಾಟೀಲ್​, ಲಕ್ಷ್ಮೀ ನಗರದ ಇಮಾಮಸಾಬ ಎಂ ಮೊರಬ, ವೀರಾಪುರ ಓಣಿ ಕರೆಮ್ಮನ ಗುಡಿ ಭೀಮ. ಸಿ. ಬಿ. ಮಡಿವಾಳರ, ಸೋನಿಯಾ ಗಾಂಧಿನಗರದ ರಾಮನಗೌಡ ಕೋಟಿಗೌಡ್ರ, ಶಶಿಧರ ಬಡಿಗೇರ, ಮಂಜುನಾಥ ಎಂತ್ಲಿ, ಜೋಳದ ಓಣಿ ತುಳಜಾ ಭವಾನಿ ಗುಡಿಯ ವಿಜಯ ಹಿರೇಮಠ ಬಂಧಿತ ಆರೋಪಿಗಳು. ಇವರ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಐವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಸ ವರ್ಷದ ವೇಳೆ ಕ್ಷುಲ್ಲಕ ಕಾರಣಕ್ಕೆ ಏಟು ತಿಂದ ಪರರಾಜ್ಯದ ಯುವಕರು.. ಸ್ಥಳೀಯ ಹುಡುಗರಿಂದ ಪುಂಡಾಟ ಆರೋಪ

ಏನಿದು ಘಟನೆ: ಮಂಗಳವಾರ ಮಧ್ಯರಾತ್ರಿ ಬಂಕಾಪುರಚೌಕ ಬಳಿಯ ಕಂಪೌಂಡ್ ಆವರಣದಲ್ಲಿ ಬಿಹಾರ ಮೂಲದ ಅನಿಲಕುಮಾರ ಸುರೇಶ ಸಿಂಗ್ ಹಾಗೂ ಆತನ ಗೆಳೆಯರು ಹೊಸ ವರ್ಷದ ಆಚರಣೆ ಮಾಡಿ ಮೂತ್ರ ವಿಸರ್ಜನೆಗೆಂದು ತೆರಳಿದ್ದರು.‌ ಆಗ ಅಲ್ಲಿದ್ದ 4-5 ಜನರ ಗುಂಪು ಇಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅವಾಚ್ಯವಾಗಿ ನಿಂದಿಸಿದ್ದರು ಎನ್ನಲಾಗ್ತಿದೆ. ಈ ವೇಳೆ ಅನಿಲಕುಮಾರ್ ಕೂಡ ಅವರಿಗೆ ಮತ್ತೆ ಅವಾಚ್ಯ ಪದಗಳಿಂದ ನಿಂದಿಸಿದ್ದನಂತೆ. ಇದರಿಂದ ಕೋಪಕೊಂಡ 12-14 ಜನರ ಗುಂಪು ಆತನ ಮೇಲೆ ಹಲ್ಲೆ ಮಾಡಿತ್ತು. ಆಗ ಅನಿಲನ ಸ್ನೇಹಿತರು ಬಿಡಿಸಲು ಬಂದಾಗ ಎರಡು ಗುಂಪಿನ ಸದಸ್ಯರ ನಡುವೆ ಹೊಡೆದಾಟವಾಗಿತ್ತು. ಈ ವೇಳೆ ಅನಿಲನಿಗೆ ಲೋಹದ ಪಾತ್ರೆಯಿಂದ ಬಲವಾಗಿ ತಲೆಗೆ ಹೊಡೆದುದ್ದಲ್ಲದೇ, ಅವನ ಸ್ನೇಹಿತರಾದ ರಾಜನಗೌಡ, ಬಿಜಿಲಾಲಗೂ ಬಲವಾಗಿ ಹೊಡೆದು ಗಾಯಗೊಳಿಸಿದ್ದರು. ಅಲ್ಲದೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರಂತೆ.

ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆಯುಕ್ತರು ಹಲ್ಲೆಕೋರರ ಪತ್ತೆಗೆ ತಂಡ ರಚಿಸಿದ್ದರು. ಈ ತಂಡದ ಪೊಲೀಸರು 8 ಜನರನ್ನು ಬಂಧಿಸಿ, ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

Intro:ಹುಬ್ಬಳ್ಳಿ-02

ಇಲ್ಲಿನ ಪಿ.ಬಿ.ರಸ್ತೆ ಬಂಕಾಪುರಚೌಕ ಬಳಿ ಮಂಗಳವಾರ ನಡುರಾತ್ರಿ ಕ್ಷುಲಕ ಕಾರಣಕ್ಕೆ ಬಿಹಾರ ಮೂಲದ ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೋಲಿಸರು ನಗರದ 8 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಿಡನಾಳದ ಅಹಮ್ಮದಸಾಬ ಎಸ್.ನದಾಫ್, ನಾಗರಾಜ ಎಸ್ ಪಾಟೀಲ, ಲಕ್ಷ್ಮೀ ನಗರದ ಇಮಾಮಸಾಬ ಎಂ ಮೊರಬ, ವೀರಾಪುರ ಓಣಿ ಕರೆಮ್ಮನ ಗುಡಿ ಬಳಿಯ ಭೀಮಸಿ ಬಿ ಮಡಿವಾಳರ, ಸೋನಿಯಾ ಗಾಂಧಿನಗರದ ರಾಮನಗೌಡ ಕೋಟಿಗೌಡ್ರ, ಶಶಿಧರ ಬಡಿಗೇರ, ಮಂಜುನಾಥ ಎಂತ್ಲಿ, ಜೋಳದ ಓಣಿ ತುಳಜಾ ಭವಾನಿ ಗುಡಿ ಬಳಿಯ ವಿಜಯ ಹಿರೇಮಠ ಬಂಧಿತರಾಗಿದ್ದಾರೆ. ಇವರ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

*ಏನಿದು ಘಟನೆ*: ಮಂಗಳವಾರ ನಡುರಾತ್ರಿ ಬಂಕಾಪುರಚೌಕ ಬಳಿಯ ನಾಂದಗೇರಕರ ಕಂಪೌಂಡ್ ಆವರಣದಲ್ಲಿ ಬಿಹಾರ ಮೂಲದ ಅನಿಲಕುಮಾರ ಸುರೇಶ ಸಿಂಗ್ ಹಾಗೂ ಆತನ ಗೆಳೆಯರು ಹೊಸ ವರ್ಷದ ಆಚರಣೆ ಮಾಡಿ ಮೂತ್ರ ವಿಸರ್ಜನೆಗೆಂದು ಬಂದಿದ್ದಾರೆ.‌ ಆಗ ಅಲ್ಲಿದ್ದ 4-5 ಜನರ ಗುಂಪು ಇಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವೇಳೆ ಅನಿಲ ಎಂಬಾತ ಕೂಡ ಅವರಿಗೆ ಮರಳಿ ಅವಾಚ್ಯವಾಗಿ ನಿಂದಿಸಿ ಬೈದಾಡಿದ್ದಾನೆ. ಇದರಿಂದ ಕೋಪಕೊಂಡ 12-14 ಜನರ ಗುಂಪು ಆತನ ಮೇಲೆ ಹಲ್ಲೆ ಮಾಡಿದೆ. ಆಗ ಅನಿಲನ ಸ್ನೇಹಿತರು ಬಿಡಸಲು ಬಂದಾಗ ಎರಡು ಗುಂಪಿನ ಸದಸ್ಯರ ನಡುವೆ ಹೊಡೆದಾಟವಾಗಿದೆ. ಈ ವೇಳೆ ಅನಿಲನಿಗೆ ಲೊಹದ ಪಾತ್ರೆಯಿಂದ ಬಲವಾಗಿ ತಲೆಗೆ ಹೊಡೆದುದ್ದಲ್ಲದೇ, ಅವನ ಸ್ನೇಹಿತರಾದ ರಾಜನಗೌಡ, ಬಿಜಿಲಾಲಗೂ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಜೊತೆಗೆ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆಯುಕ್ತರು ಹಲ್ಲೆ ಕೋರರ ಪತ್ತೆಗೆ ತಂಡ ರಚಿಸಿದ್ದರು. ಈ ತಂಡದ ಪೋಲಿಸರು ಎಂಟು ಜನರನ್ನು ಬಂಧಿಸಿ, ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

Note.
ಆರೋಪಿಗಳಲ್ಲಿ ಕೆಲವರು ಅಪ್ರಾಪ್ತರಿರುವದರಿಂದ ಫೋಟೋ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಸಿಕರೆ ಹಾಕತ್ತೀನಿ. ಈ ವಿಡಿಯೋ ಬಳಸಿಕೊಳ್ಳಿBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.